Connect with us


      
ವಿದೇಶ

ಪಾಕಿಸ್ತಾನದಲ್ಲಿ ಐಸಿಸ್ ನಂಟು ಹೊಂದಿದ್ದ ಕಮಾಂಡರ್ ಹತ್ಯೆ

Iranna Anchatageri

Published

on

ಇಸ್ಲಾಮಾಬಾದ್: ಮಾರ್ಚ್ 25 (ಯುಎನ್‌ಐ/ಕ್ಸಿನ್ಹುವಾ) ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಭಯೋತ್ಪಾದಕ ಕಮಾಂಡರ್‌ನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಪೆಶಾವರದ ಈ ಪ್ರಾಂತೀಯ ರಾಜಧಾನಿಯಲ್ಲಿ ಭಯೋತ್ಪಾದಕ ಕಮಾಂಡರ್ ಅಡಗುತಾಣದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರು ಈ ಹತ್ಯೆ ಮಾಡಿದ್ದಾರೆ.

ಪೊಲೀಸ್ ಭಯೋತ್ಪಾದನಾ ನಿಗ್ರಹ ವಿಭಾಗವು ಭಯೋತ್ಪಾದಕರ ಅಡಗುತಾಣದ ಮೇಲೆ ಗುರುವಾರ ದಾಳಿ ನಡೆಸಿತು. ಆಗ ಐಸಿಸ್ ಕಮಾಂಡರ್ ಮೇಲೆ ಪೊಲೀಸರು ಗುಂಡು ಹಾರಿಸಿದರು. ಈ ವೇಳೆ ಪೊಲೀಸರು ಪ್ರತಿಯಾಗಿ ಭಯೋತ್ಪಾದಕನನ್ನು ಹತ್ಯೆಗೈದರು, ಆತನ ಸಹಚರರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹತ್ಯೆಗೀಡಾದ ಭಯೋತ್ಪಾದಕ ದೇಶದಲ್ಲಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಗುಂಪಿನ ಸ್ಥಳೀಯ ಕಮಾಂಡರ್ ಆಗಿದ್ದು, ಪೇಶಾವರದ ಮಸೀದಿಯೊಂದರ ಮೇಲೆ ಇತ್ತೀಚೆಗೆ ನಡೆದ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ, ಈ ದಾಳಿಗಳ ವೇಳೆ ಹಲವು ಜನರು ಅಸುನೀಗಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಇಮಾಮ್ ಸೇರಿದಂತೆ ಕೆಲವು ಪೊಲೀಸರನ್ನು ಐಸಿಸ್ ಕಮಾಂಡರ್ ಕೊಂದಿದ್ದಲ್ಲದೆ ಉದ್ದೇಶಿತ ಹತ್ಯೆಗಳ ಹಲವಾರು ಘಟನೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಪರಾರಿಯಾಗಿರುವ ಭಯೋತ್ಪಾದಕನ ಸಹಚರರಿಗಾಗಿ ಶೋಧ ನಡೆಸಲಾಗುತ್ತಿದೆ.

Share