Connect with us


      




ಕರ್ನಾಟಕ

ಹೆಣ್ಣು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ರಾಷ್ಟ್ರ ರಕ್ಷಣೆಗೂ ಸೈ: ಗೃಹ ಸಚಿವ

Kumara Raitha

Published

on

ಮೈಸೂರು: ಫೆಬ್ರವರಿ ೦೨ (ಯು.ಎನ್.‌ಐ.) ಹೆಣ್ಣು ಅಬಲೆಯಲ್ಲ, ಹಾಗೂ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ರಾಷ್ಟ್ರ ಹಾಗೂ ಸಮಾಜ ರಕ್ಷಣೆಗೂ ಸಿದ್ದ ಎಂದು ಅವರು ಯಶಸ್ವಿಯಾಗಿ ನಿರೂಪಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರಗ ಜ್ಞಾನೇಂದ್ರ ಅವರು ಇಂದು  ಮೈಸೂರು ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ಆಯೋಜಿತವಾಗಿದ್ದ ೪೫ನೆ ತಂಡದ ಆರಕ್ಷಕ ಉಪನಿರೀಕ್ಷಕರ (ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಸುಮಾರು ೨೨೮ ಪ್ರಶಿಕ್ಷಣಾರ್ಥಿಗಳು ಇಂದು ತರಭೇತಿ ಮುಗಿಸಿ ಸೇವೆಗೆ ಸಜ್ಜಾಗಿದ್ದು, ಅವರುಗಳಲ್ಲಿ ೪೫ ಮಂದಿ ಮಹಿಳೆಯರು, ಪುರುಷ ಪ್ರಶಿಕ್ಷಣಾರ್ಥಿ ಗಳಿಗೆ ಸರಿಸಾಟಿಯಾಗಿ, ತರಬೇತಿ ಮುಗಿಸಿ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ, ಎಂದು ಪ್ರಶಂಸಿಸಿದರು.

ತರಬೇತಿ ಮುಗಿಸಿ ಸೇವೆಗೆ ತೆರಳುತ್ತಿರುವ ತಾವುಗಳು, ಸಮಾಜವಿರೋಧಿ ಶಕ್ತಿಗಳಿಗೆ ಭಯ ಹುಟ್ಟಿಸಬೇಕು, ಅದೇ ಸಮಯದಲ್ಲಿ ಕಾನೂನು ಗೌರವಿಸುವ ನಾಗರಿಕರಿಗೆ, ಅಭಯ ನೀಡುವ ಕೆಲಸ ಮಾಡಬೇಕು ಎಂದು, ಕಿವಿಮಾತು ಹೇಳಿದರು.

ಎಡಿಜಿಪಿ ಪಿ. ಹರಿಶೇಖರನ್, (ತರಭೇತಿ) ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್  ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳೂ ಉಪಸ್ತಿತರಿದ್ದರು.

Share