Connect with us


      
ಸಿನೆಮಾ

ಪೊನ್ನಿಯಿನ್ ಸೆಲ್ವನ್ ಹೊಸ ಪೋಸ್ಟರ್: ನಂದಿನಿಯಾಗಿ ಮೋಡಿ ಮಾಡುತ್ತಿರುವ ಐಶ್ವರ್ಯಾ ರೈ

Lakshmi Vijaya

Published

on

ಮುಂಬೈ:ಜುಲೈ 06 (ಯು.ಎನ್.ಐ.) ನಟಿ ಐಶ್ವರ್ಯಾ ರೈ ಅಭಿನಯದ ಪೊನ್ನಿಯಿನ್ ಸೆಲ್ವನ್ ಚಿತ್ರದ ಹೊಸ ಪೋಸ್ಟರ್ ಅನ್ನು ಸಿನಿಮಾದ ನಿರ್ಮಾಪಕರು ಹಂಚಿಕೊಂಡಿದ್ದು  ಐಶ್ವರ್ಯಾ ರೈ ಬಚ್ಚನ್ ಅವರ ನೋಟ ಬೆರಗುಗೊಳಿಸುತ್ತಿದೆ.  ಲೈಕಾ ಪ್ರೊಡಕ್ಷನ್ಸ್ ಹಂಚಿಕೊಂಡಿರುವ ಪೋಸ್ಟರ್ ನಲ್ಲಿ  ಕೆಂಪು ಸೀರೆಯುಟ್ಟು, ಆಭರಣ ಧರಿಸಿ ಕಂಗೊಳಿಸುತ್ತಿರುವ ಐಶ್ವರ್ಯಾ ರೈ ಬಚ್ಚನ್ ಅವರ ನೋಟ ಕಣ್ಸೆಳೆಯುತ್ತಿದೆ.   ಹಂಚಿಕೊಂಡಿದೆ.

ಪೋಸ್ಟ್ ನಲ್ಲಿನ ಶೀರ್ಷಿಕೆ ಹೀಗಿದೆ: “ಪ್ರತೀಕಾರಕ್ಕೆ ಸುಂದರವಾದ ಮುಖವಿದೆ! ಪಜುವೂರಿನ ರಾಣಿ ನಂದಿನಿಯನ್ನು ಭೇಟಿ ಮಾಡಿ. ಪೊನ್ನಿಯಿನ್ ಸೆಲ್ವನ್ ಭಾಗ 1 ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.”

ಸಿನಿಮಾವು ಕಲ್ಕಿ ಕೃಷ್ಣಮೂರ್ತಿಯವರ ಜನಪ್ರಿಯ ಐತಿಹಾಸಿಕ ಕಾದಂಬರಿ ಪೊನ್ನಿಯಿನ್ ಸೆಲ್ವನ್ (ಪೊನ್ನಿಯ ಮಗ) ಕಥೆ ಆಧರಿಸಿದೆ . ಚಿತ್ರವನ್ನ ಮಣಿರತ್ನಂ ನಿರ್ದೇಶಿಸುತ್ತಿದ್ದಾರೆ. ವಿಕ್ರಮ್, ಕಾರ್ತಿ, ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್, ಜಯಂ ರವಿ ಮತ್ತು ಐಶ್ವರ್ಯ ಲಕ್ಷ್ಮಿ ಸೇರಿದಂತೆ ಇತರರನ್ನು ಒಳಗೊಂಡಿರುವ ಪ್ರಭಾವಶಾಲಿ ತಾರಾಗಣವನ್ನು ಚಿತ್ರ ಹೊಂದಿದೆ. ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.

ಐಶ್ವರ್ಯಾ ರೈ ಬಚ್ಚನ್ ಈ ಹಿಂದೆ 2007 ರ ಚಿತ್ರ ಗುರು ಮತ್ತು 2010 ರ ರಾವಣ ಚಲನಚಿತ್ರದಲ್ಲಿ ನಿರ್ದೇಶಕ ಮಣಿರತ್ನಂರೊಂದಿಗೆ ಕೆಲಸ ಮಾಡಿದ್ದಾರೆ. ಆ ಎರಡೂ ಸಿನಿಮಾ ಐಶ್ವರ್ಯಾ ಅವರ ಪತಿ ಅಭಿಷೇಕ್ ಬಚ್ಚನ್ ಅನ್ನು ಒಳಗೊಂಡಿತ್ತು. 1997 ರ ತಮಿಳು ಚಲನಚಿತ್ರ ಇರುವರ್‌ನಲ್ಲೂ ಮಣಿರತ್ನಂ ಮತ್ತು ಐಶ್ವರ್ಯಾ ರೈ ಒಟ್ಟಿಗೆ ಕೆಲಸ ಮಾಡಿದರು.  ಇದು ತಮಿಳು ಚಿತ್ರರಂಗದಲ್ಲಿ ಐಶ್ವರ್ಯಾ ಅವರ ಚೊಚ್ಚಲ ಸಿನಿಮಾವಾಗಿತ್ತು. ಐಶ್ವರ್ಯಾ ರೈ ಬಚ್ಚನ್ ಕೊನೆಯದಾಗಿ 2018 ರ ಫನ್ನಿ ಖಾನ್ ನಲ್ಲಿ ಕಾಣಿಸಿಕೊಂಡರು.

Share