Connect with us


      
ದೇಶ

ಗೋವಾ; ಸೋಮವಾರ ಪ್ರಮೋದ್ ಸಾವಂತ್ ಪ್ರಮಾಣ ವಚನ

Kumara Raitha

Published

on

ಪಣಜಿ: ಮಾರ್ಚ್ 27 (ಯು.ಎನ್.ಐ.) ಗೋವಾ ಮುಖ್ಯಮಂತ್ರಿಯಾಗಿ ಮಾ.28ರ ಸೋಮವಾರ ಪ್ರಮೋದ್ ಸಾವಂತ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರು ಬಾರಿ ಶಾಸಕರಾಗಿರುವ ಪ್ರಮೋದ್ ಸಾವಂತ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಮುಖ್ಯಮಂತ್ರಿ ಜೊತೆಗೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ಇತರ ಸಂಪುಟ ಸಚಿವರ ಸಂಖ್ಯೆ ಬಗ್ಗೆ ಬಿಜೆಪಿ ಇದುವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಮನೋಹರ್ ಪರಿಕ್ಕರ್ ಬಳಿಕ ರಾಜಭವನದ ಹೊರಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎರಡನೇ ಸಿಎಂ ಪ್ರಮೋದ್ ಸಾವಂತ್ ಆಗಲಿದ್ದಾರೆ. 40 ಸ್ಥಾನಗಳ ಪೈಕಿ 20 ಸ್ಥಾಗದಲ್ಲಿ ಗೆದ್ದಿರೋ ಬಿಜೆಪಿ ಬಹುಮತಕ್ಕೆ 1 ಸ್ಥಾನ ಬೇಕಾಗಿದೆ. ಎಂಜಿಪಿ ಪಕ್ಷದ ಮೂವರು ಹಾಗು ಇಬ್ಬರು ಸ್ವತಂತ್ರ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳ್ಳೈ ಅವರು ಮಾರ್ಚ್ 29 ರಿಂದ ಹೊಸ ವಿಧಾನಸಭೆಯ ಎರಡು ದಿನಗಳ ಅಧಿವೇಶನವನ್ನು ಕರೆದಿದ್ದಾರೆ, ಈ ಸಮಯದಲ್ಲಿ ಸಾವಂತ್ ಅವರು ವಿಶ್ವಾಸ ಮತವನ್ನು ಕೇಳಬೇಕಾಗುತ್ತದೆ. ಅಧಿವೇಶನದಲ್ಲಿ ಹೊಸ ಸ್ಪೀಕರ್ ಕೂಡ ಆಯ್ಕೆಯಾಗುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸ್ಪೀಕರ್ ಸ್ಥಾನಕ್ಕೆ ಪೈಪೋಟಿಗಿಳಿದಿದ್ದು ತಮ್ಮ ಅಭ್ಯರ್ಥಿಗಳನ್ನ ಆಯ್ಕೆ ಮಾಡಿವೆ.

ಕಪ್ಪು ಬಟ್ಟೆ. ಮಾಸ್ಕ್ ಧರಿಸಿದ್ರೆ ನೋ ಎಂಟ್ರಿ
ಸಿಎಂ ಆಗಿ ಪ್ರಮೋದ್ ಸಾವಂತ್ ಪ್ರವಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಕಪ್ಪು ಮಾಸ್ಕ್, ಕಪ್ಪು ಬಟ್ಟೆ ಧರಿಸಿ ಬರುವವರಿಗೆ ಪ್ರವೇಶವಿಲ್ಲ. ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಸಮಾರಂಭಕ್ಕೆ ಸರ್ವರಿಗೂ ಮುಕ್ತ ಅವಕಾಶವಿದೆ. ಆದ್ರೆ ಕಪ್ಪು ಮಾಸ್ಕ್ ಮತ್ತು ಕಪ್ಪು ಬಟ್ಟೆ ಧರಿಸಿ ಬರುವವರಿಗೆ ಮಾತ್ರ ಅವಕಾಶವಿಲ್ಲ ಎಂದು ಗೋವಾ ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

Share