Published
4 months agoon
ವಾಷಿಂಗ್ಟನ್: ಜನೆವರಿ 25 (ಯು.ಎನ್.ಐ.) ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭೀತಿ ನಿರಂತರವಾಗಿ ಹೆಚ್ಚಾಗ ತೊಡಗಿದೆ. ಈ ಭಯದ ಮಧ್ಯೆ ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಪೆಂಟಗನ್, ಪೂರ್ವ ಯುರೋಪ್ ನಲ್ಲಿ ನಿಯೋಜನೆಗಾಗಿ 8,500 ಯುಎಸ್ ಸೈನಿಕರನ್ನು ‘ಹೈ ಅಲರ್ಟ್’ ನಲ್ಲಿ ಇಡಲಾಗಿದೆ. ಈ ಸೈನಿಕರಲ್ಲಿ ಕಾಂಬ್ಯಾಟ್ ಟೀಮ್, ಹೆಲ್ತ್ ವರ್ಕರ್ಸ್, ಗುಪ್ತಚರ ಮತ್ತು ಸರ್ವಿಲೆನ್ಸ್ ತಂಡಗಳು ಸೇರಿವೆ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜಾನ್ ಕಿರ್ಬಿ, “ಇಲ್ಲಿಯವರೆಗೆ ಈ ಸೈನಿಕರ ನಿಯೋಜನೆಗೆ ಯಾವುದೇ ಆದೇಶ ನೀಡಿಲ್ಲ.. ಯಾವುದೇ ಮಿಷನ್ ಅನ್ನೂ ಸಹ ಅವರಿಗೆ ಒಪ್ಪಿಸಿಲ್ಲ. ಆದರೆ ಪೂರ್ವ ಯುರೋಪಿನಲ್ಲಿ ನ್ಯಾಟೋ ಬಲಪಡಿಸಲು ಅಮೆರಿಕ ಪಡೆ ಈ ಪ್ರದೇಶದಲ್ಲಿ ನಿಯೋಜನೆ ಮಾಡುವ ಸಾಧ್ಯತೆ ಇದೆ. ಯುರೋಪ್ ನಲ್ಲಿ ಹೆಚ್ಚುವರಿ ಯುಎಸ್ ಪಡೆಗಳ ನಿಯೋಜನೆ ನ್ಯಾಟೋ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಕಿರ್ಬಿ ಹೇಳಿದ್ದಾರೆ.
ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಾಜಕೀಯ ಮಾತುಕತೆಗೆ ಕರೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ “ಎರಡು ದೇಶಗಳ ಮಧ್ಯೆ ಯುದ್ಧದ ಬದಲಿಗೆ ಮಾತುಕತೆಯ ಮೂಲಕ ಪರಿಹಾರವನ್ನು ವಿಶ್ವಸಂಸ್ಥೆ ಬಯಸುತ್ತದೆ. ಯುದ್ಧ ತಗ್ಗಿಸುವ ಸಂಬಂಧ ತ್ವರಿತವಾಗಿ ಕಾರ್ಯನಿರ್ವಹಿಸಲು ಎಲ್ಲ ಪಕ್ಷಗಳನ್ನು ಒತ್ತಾಯಿಸುತ್ತೇವೆ” ಎಂದು ಹೇಳಿದ್ದಾರೆ.
ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು
ಪುಟಿನ್ ಪ್ರವೇಶಕ್ಕೆ ನಿಷೇಧ ಹೇರಿದ ಕೆನಡಾ!
ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ
ಧರ್ಮಶಾಲಾದಲ್ಲಿ ಖಲಿಸ್ತಾನಿ ಧ್ವಜ: ಪನ್ನುಗೆ ಪಾಕಿಸ್ತಾನದ ಐಎಸ್ಐ ಹುಕುಂ!
$40 ಶತಕೋಟಿ ಉಕ್ರೇನ್ ಹಣಕಾಸು ನೆರವು ಮಸೂದೆ ಅಮೆರಿಕದಲ್ಲಿ ಅಂಗೀಕಾರ
ಪುಟಿನ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಯ್ತಾ? ಆ ಫೋಟೋದಲ್ಲಿರೋದೇನು?