Connect with us


      
ವಿದೇಶ

‘ಮಿಗ್​​-21’ ವಿಮಾನದ ಪ್ರತಿಕೃತಿಯನ್ನು ಅಬ್ದುಲ್ ಹಮೀದ್​ ಅವರಿಗೆ ನೀಡಿದ ಕೋವಿಂದ್

Bindushree Hosuru

Published

on

ಢಾಕಾ : ಡಿ. 16 (ಯು.ಎನ್.ಐ) ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಬಾಂಗ್ಲಾದೇಶದ ರಾಷ್ಟ್ರಪತಿ ಅಬ್ದುಲ್ ಹಮೀದ್ ಅವರಿಗೆ 1971 ರ ಕಾಲದ ಮಿಗ್​​-21 ವಿಮಾನದ ಪ್ರತಿಕೃತಿಯನ್ನು ನೀಡಿದರು.

ರಾಷ್ಟ್ರಪತಿ ಕೋವಿಂದ್ ಅವರು ಡಿಸೆಂಬರ್ 15 ರಿಂದ 17 ರವರೆಗೆ ಬಾಂಗ್ಲಾದೇಶದಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ಕೋವಿಡ್​​-19 ಸಾಂಕ್ರಾಮಿಕ ರೋಗ ಹರಡಿದ ನಂತರ ಅವರ ಮೊದಲ ಭೇಟಿ ಇದಾಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 1971 ರ ಕಾಲದ ಮಿಗ್​​- 21 ವಿಮಾನದ ಪ್ರತಿಕೃತಿಯನ್ನು ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರಿಗೆ ನೀಡಿದರು. ಭಾರತವು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಿದ ಅದೇ ಮಾದರಿಯ ವಿಮಾನವನ್ನು ಬಾಂಗ್ಲಾದೇಶದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ ಎಂದು ಭಾರತದ ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.

ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ 1971ರಲ್ಲಿ ಯುದ್ಧ ಗೆದ್ಧ 50ನೇ ವರ್ಷಾಚರಣೆ ಅಂಗವಾಗಿ ಕೋವಿಂದ್ ಅವರು, ಅಬ್ದುಲ್ ಹಮೀದ್ ಅವರಿಗೆ ಉಭಯ ದೇಶಗಳ ಯೋಧರ ಬಲಿದಾನದ ಸ್ಮರಣೆಗಾಗಿ ಮಿಗ್​​- 21 ವಿಮಾನದ ಪ್ರತಿಕೃತಿಯನ್ನು ನೀಡಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಬಾಂಧವ್ಯದ ಹಿನ್ನೆಲೆ ಭಾರತವೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Share