Connect with us


      
ದೇಶ

ರಾಷ್ಟ್ರಪತಿ ಕೋವಿಂದ್ ಭೇಟಿ ಮಾಡಿದ ಪ್ರಧಾನಿ; ಭದ್ರತಾ ಲೋಪ ದುರದೃಷ್ಟಕರ ಎಂದ ದೇವೇಗೌಡ

Iranna Anchatageri

Published

on

ಹೊಸದಿಲ್ಲಿ : ಜನೆವರಿ 06 (ಯು.ಎನ್.ಐ.) ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಕುರಿತಂತೆ ಚರ್ಚೆ ನಡಸಿದರು. ಅಲ್ಲದೆ, ಪರಸ್ಪರ ಹೊಸ ವರ್ಷದ ಶುಭಾಶಯ ಹಾಗೂ ಭಾರತದ ಉತ್ತಮ ಭವಿಷ್ಯತ್ತಿಗಾಗಿ ಮಾತುಕತೆ ನಡೆಸಿದರು. ಈ ಮಧ್ಯೆ ಪ್ರಧಾನಿ ಮೋದಿ ಪಂಜಾಬ್  ಭೇಟಿ ವೇಳೆ ಆದ ಭದ್ರತಾ ಲೋಪದ ಬಗ್ಗೆ ರಾಷ್ಟ್ರಪತಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಪ್ರಧಾನಿಯವರ ಭದ್ರತೆಯ ಲೋಪಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳ ವ್ಯಕ್ತಪಡಿಸಿದ್ದಾರೆನ್ನಲಾಗುತ್ತಿದೆ.

ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಪ್ರಧಾನಿಯವರ ಭದ್ರತಾ ಲೋಪ ದುರದೃಷ್ಟಕರ ಎಂದು ಟ್ವೀಟ್ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಪ್ರಧಾನಿ ಭದ್ರತೆ ಬಗ್ಗೆ ವಿವಾದವಿದೆ. ಇದೊಂದು ದುರದೃಷ್ಟಕರ ಸಂಗತಿ. ಭಾರತದ ಅತ್ಯುನ್ನತ ಕಾರ್ಯನಿರ್ವಾಹಕ ಕಚೇರಿಯನ್ನು ರಕ್ಷಿಸುವಾಗ ನಾವು ಎಂದಿಗೂ ಸಂತೃಪ್ತರಾಗಬಾರದು. ಈ ಹಿಂದೆ ಹಾಕಿಕೊಟ್ಟ ಸಂಪ್ರದಾಯ ಹಾಗೂ ಘಟನೆಗಳಿಂದ ಕಲಿಯಬೇಕು” ಎಂದು ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ನಿನ್ನೆ ಪಂಜಾಬ್ ಗೆ ಭೇಟಿ ನೀಡಿದ್ದಾಗ ರೈತರು ಪ್ರತಿಭಟನೆ ನಡೆಸಿದ್ದರು. ಇದರಿಂದ ಫ್ಲೈಓವರ್ ನಲ್ಲಿ ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ಸಿಲುಕಿ ಹಾಕಿಕೊಂಡಿದ್ದರು. ಈ ಸ್ಥಳ ಪಾಕಿಸ್ತಾನ ಗಡಿಯಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿತ್ತು. ಪ್ರಧಾನಿ ಭದ್ರತಾ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪಂಜಾಬ್ ಆಡಳಿತರೂಢ ಸರ್ಕಾರದ ಮೇಲೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.

Share