Connect with us


      
ದೇಶ

ಇದೇ ೨೮ ರಂದು ಪ್ರಧಾನಿ ಮೋದಿ ಮನದ ಮಾತು

Kumara Raitha

Published

on

ನವದೆಹಲಿ,ನ ೧೪( ಯುಎನ್ ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ೨೮ರಂದು ಆಕಾಶವಾಣಿಯ ತಮ್ಮ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶದಲ್ಲಿರುವ ಭಾರತೀಯರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರಮದ ೮೩ನೇ ಆವೃತ್ತಿ ಇದಾಗಿದ್ದು, ವಿವಿಧ ವಿಚಾರಗಳು, ವಿಷಯಗಳನ್ನು ಹಂಚಿಕೊಳ್ಳುವಂತೆ ಜನತೆಯಲ್ಲಿ ಅವರು ಮನವಿ ಮಾಡಿದ್ದಾರೆ. ಮೈ ಗೌ, ನಮೋ ಆಪ್ ಅಥವಾ ಮುದ್ರಿತ ಸಂದೇಶವನ್ನು ಇಲ್ಲಿ ದಾಖಲಿಸಬಹುದಾಗಿದೆ. ಅಲ್ಲದೆ ೧೮೦೦-೧೧-೭೮೦೦ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿಯೂ ಇದೇ ೨೬ರೊಳಗೆ ಸಂದೇಶಗಳನ್ನು ದಾಖಲಿಸಬಹುದಾಗಿದೆ.

Share