Published
5 months agoon
By
Vanitha Jainನವದೆಹಲಿ, ಡಿಸೆಂಬರ್ 7, (ಯು.ಎನ್.ಐ): ಸಂಸದರೇ, ನಿಮ್ಮನ್ನು ನೀವು ಬದಲಾಯಿಸಿಕೊಳ್ಳದಿದ್ದರೆ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಶನಲ್ ಸೆಂಟರ್ನಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಸಂಸದರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬಿಜೆಪಿಯ ಕೆಲವು ಸಂಸದರು ಸಂಸತ್ತಿಗೆ ಗೈರು ಹಾಜರಾಗಿದ್ದರು. ಆದ ಕಾರಣ ಸಂಸತ್ತಿನ ಕಲಾಪವನ್ನು ಮುಂದೂಡಲಾಯಿತು. ಆದ ಕಾರಣ ಮೋದಿ ಅವರು, ದಯವಿಟ್ಟು ಪಕ್ಷದ ಸಂಸದರು ಶಿಶ್ತು, ಸಮಯಪ್ರಜ್ಞೆ ಬೆಳೆಸಿಕೊಳ್ಳುವಂತೆ ತಿಳಿ ಹೇಳಿದ ಅವರು ದಯವಿಟ್ಟು ಸಂಸತ್ತು ಮತ್ತು ಸಭೆಗಳಿಗೆ ಹಾಜರಾಗಿ, ಈ ಬಗ್ಗೆ ನಿರಂತರವಾಗಿ ನಿಮ್ಮ ಮೇಲೆ ಒತ್ತಡ ಹೇರುವುದು ಮತ್ತು ಸಂಸದರನ್ನು ಮಕ್ಕಳಂತೆ ನಡೆಸಿಕೊಳ್ಳುವುದು ನನಗೆ ಸರಿಕಾಣುವುದಿಲ್ಲ. ಮಕ್ಕಳಂತೆ ವರ್ತಿಸಬೇಡಿ. ಮಕ್ಕಳಿಗೆ ಒಂದು ತಪ್ಪಿನ ಬಗ್ಗೆ ಅರಿವು ಮೂಡಿಸಿದರೆ ಪುನಃ ಮಕ್ಕಳು ಆ ತಪ್ಪನ್ನು ಮಾಡುವುದಿಲ್ಲ. ಹಾಗಾಗಿ ನಿಮ್ಮನ್ನು ನೀವೇ ಬದಲಾಯಿಸಿಕೊಳ್ಳದಿದ್ದರೆ ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳಾಗುವುದು ಸಹಜ ಎಂದು ಹೇಳಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಹಾಜರಾತಿ ಕುರಿತು ಮಾತನಾಡಿದ್ದರು. ಆದರೂ ತಲೆಕೆಡಿಸಿಕೊಳ್ಳದ ಸಂಸದರಿಗೆ ಈ ಬಾರಿ ಖಾರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿ: ಮೋದಿ
ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ ಹಿಂಪಡೆಯಲು ಮೋದಿ ಸೂಚನೆ
ಕೊರೋನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ: ಮೋದಿ
ತಂಜಾವೂರು ರಥೋತ್ಸವ ದುರಂತ; ಮೋದಿ, ಸ್ಟಾಲಿನ್ ಪರಿಹಾರ ಘೋಷಣೆ
ಮೋದಿ ನಿವಾಸ ಹೊರಗೆ ನಮಾಜ್, ಹನುಮಾನ್ ಚಾಲೀಸಾ, ನಮೋಕರ ಮಂತ್ರ ಪಠಿಸಲು ಅವಕಾಶ ಕೋರಿದ ಎನ್ ಸಿಪಿ ನಾಯಕಿ
ಪ್ರಧಾನಿ ಮೋದಿಯ ಕಾಶ್ಮೀರ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ ಪಾಕಿಸ್ತಾನ