Connect with us


      
ದೇಶ

ಪ್ರಧಾನಿ ಭದ್ರತಾ ಲೋಪ : ಬಿಜೆಪಿ ಕಾಂಗ್ರೆಸ್ ಜಟಾಪಟಿ!

Iranna Anchatageri

Published

on

ಹೊಸದಿಲ್ಲಿ : ಜನೆವರಿ 10 (ಯು.ಎನ್.ಐ.) ಪಂಜಾಬ್ ನಲ್ಲಿ ಆಗಿರುವ ಪ್ರಧಾನಿ ಭದ್ರತ ಲೋಪ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಟಾಪಟಿಗೆ ಕಾರಣವಾಗುತ್ತಿದೆ. ಪ್ರಧಾನಿ ಭದ್ರತೆ ಲೋಪ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಂಜೀತ್ ಸಿಂಗ್ ಚನ್ನಿಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಪ್ರಧಾನಿಗೆ ಭದ್ರತಾ ಲೋಪ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

ಈ ಸುದ್ದಿ ಬಿತ್ತರಾಗುತ್ತಿದ್ದಂತೆ ಪಂಜಾಬ್ ಮುಖ್ಯಮಂತ್ರಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ‘ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾವ ಸಾಂವಿಧಾನಿಕ ಹುದ್ದೆ ಹೊಂದಿದ್ದಾರೆ.? ಮುಖ್ಯಮಂತ್ರಿಯಿಂದ ಮಾಹಿತಿ ಪಡೆಯಲು ಪ್ರಿಯಾಂಕ ವಾದ್ರಾ ಯಾರು? ಗಾಂಧಿ ಕುಟುಂಬವು ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ನೀವೇ ಏಕೆ ಹೀಗೆ ಮಾಡಿದ್ದೀರಿ ಅನ್ನೋದನ್ನು ಸಿಎಂ ಚನ್ನಿ ತಿಳಿಸಬೇಕೆಂದು ಸಂಬಿತ್ ಪಾತ್ರಾ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪವಾಗಿಲ್ಲ ಎಂದು ಪಂಜಾಬ್ ಸಿಎಂ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಪ್ರಧಾನಿ ಮೋದಿ ಭದ್ರತಾ ಲೋಪ ಪ್ರಕರಣದಲ್ಲಿ ರಾಜಕೀಯ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಈ ಎಲ್ಲ ಘಟನೆಗಳ ಬಳಿಕ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ, ‘ಪಿಎಂ ಮೋದಿ ಭಾರತದ ಪ್ರಧಾನಿ. ಇಡೀ ದೇಶದ ಜನತೆಗೆ ಅವರ ಬಗ್ಗೆ ಕಾಳಜಿ ಇದೆ. ನನಗೂ ಅವರ ಬಗ್ಗೆ ಚಿಂತೆ ಇದೆ. ಅದಕ್ಕಾಗಿಯೇ ಸಿಎಂ ಚನ್ನಿ ಅವರಿಗೆ ಕರೆ ಮಾಡಿ ಈ ಸಂಬಂಧ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಪಂಜಾಬ್ ಸಿಎಂಗೆ ಪ್ರಿಯಾಂಕ ಗಾಂಧಿ ಫೋನ್ ಮಾಡಿ ಮಾಹಿತಿ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ತೀವ್ರ ಆಕ್ರೋಶ ಹೊರ ಹಾಕಿತ್ತು. ಈ ಬೆನ್ನಲ್ಲೇ, ಪ್ರಿಯಾಂಕ ಗಾಂಧಿ ಪ್ರತಿಕ್ರಿಯೆ ಮುನ್ನೆಲೆಗೆ ಬಂದಿದೆ.

ಬಿಜೆಪಿ ವದಂತಿ ಹಬ್ಬಿಸುತ್ತಿದೆ, ಜೀವ ಬೆದರಿಕೆ ಇಲ್ಲ

“ಪ್ರಧಾನಿಗೆ ಭದ್ರತಾ ಲೋಪ ವಿಚಾರದಲ್ಲಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ವದಂತಿ ಹಬ್ಬಿಸುತ್ತಿದೆ. ಪಂಜಾಬ್‌ನಲ್ಲಿ ಪ್ರಧಾನಿಯವರ ಜೀವಕ್ಕೆ ಯಾವುದೇ ಬೆದರಿಕೆ ಇರಲಿಲ್ಲ. ಪ್ರಧಾನಿ ಮೋದಿ ಜೊತೆ ಮಾತನಾಡಲು ಸಮಯ ಕೇಳಿದ್ದೇನೆ” ಎಂದು ಚನ್ನಿ ಹೇಳಿದ್ದಾರೆ. “ಪ್ರಧಾನಿ ಮೋದಿಗೆ ಗೌರವ ಕೊಡುತ್ತೇನೆ ಹಾಗೂ ಅವರ ದೀರ್ಘಾಯುಷ್ಯವನ್ನು ಬಯಸುತ್ತೇನೆ. ಇದರಲ್ಲಿ ಪಂಜಾಬ್ ಪೊಲೀಸರ ಯಾವುದೇ ತಪ್ಪಿಲ್ಲ. ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಗಲಾಟೆ ಮಾಡಲು ಯತ್ನಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಫಿರೋಜ್‌ಪುರ ರಾಲಿಯಲ್ಲಿ 70 ಸಾವಿರ ಕುರ್ಚಿಗಳನ್ನು ಅಳವಡಿಸಲಾಗಿತ್ತು. ಆದರೆ 700 ಜನರು ಸಹ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಚನ್ನಿ ಹೇಳಿದ್ದಾರೆ.

Share