Connect with us


      
ಸಿನೆಮಾ

ಇನ್‍ಸ್ಟಾಗ್ರಾಮ್ ಅತಿಹೆಚ್ಚು ಅನುಯಾಯಿಗಳ ಪಡೆದು ಮೊದಲ ಸ್ಥಾನದಲ್ಲಿದ್ದಾರೆ ಪ್ರಿಯಾಂಕಾ ಚೋಪ್ರಾ

Vanitha Jain

Published

on

ಮುಂಬೈ: ಜನೆವರಿ 05 (ಯು.ಎನ್.ಐ.) ಗ್ಲೋಬಲ್ ತಾರೆ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಅನುಯಾಯಿಗಳನ್ನು ಪಡೆದುಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿ ಮಿಂಚಿದ್ದಾರೆ.

ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಸೂಪರ್‍ಸ್ಟಾರ್ ಶಾರುಖ್ ಖಾನ್ ಮತ್ತು ಅವರ ಸಮಕಾಲೀನರಾದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರನ್ನು ಹಿಂದಿಕ್ಕಿದ್ದಾರೆ.

ಹಾಲಿವುಡ್ ಮತ್ತು ಬಾಲಿವುಡ್ ಎರಡರಲ್ಲೂ ತಮ್ಮದೇ ಛಾಪನ್ನು ಮೂಡಿಸುತ್ತಿರುವ ಪ್ರಿಯಾಂಕಾ ಪ್ರಸ್ತುತ ಇನ್‍ಸ್ಟಾಗ್ರಾಮ್‍ನಲ್ಲಿ 72.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ನಟಿ ಶ್ರದ್ಧಾ ಕಪೂರ್ 68.6 ಮಿಲಿಯನ್ ಅನುಯಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 63.4 ಮಿಲಿಯನ್ ಅನುಯಾಯಿಗಳೊಂದಿಗೆ ದೀಪಿಕಾ ಮೂರನೇ ಸ್ಥಾನದಲ್ಲಿದ್ದಾರೆ.

ಅಕ್ಷಯ್ ಕುಮಾರ್ ಅವರಂತಹ ಇತರ ಸೂಪರ್ ಸ್ಟಾರ್‌ಗಳು 58.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ, ಕತ್ರಿನಾ 60.4 ಮತ್ತು ಅನುಷ್ಕಾ ಶರ್ಮಾ 55.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ದೇಸಿ ಹುಡುಗಿ ಕೊನೆಯದಾಗಿ ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್ ನಲ್ಲಿ ಸತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು

Share