Connect with us


      




ಸಾಮಾನ್ಯ

ಪ್ರೋ ಕಬಡ್ಡಿ ಲೀಗ್ ಸೀಸನ್ 8 ಫೈನಲ್: ಇಂದು ಪಟ್ನಾ ಜೊತೆಗೆ ಡೆಲ್ಲಿ ಸೆಣಸಾಟ

UNI Kannada

Published

on

ಬೆಂಗಳೂರು:ಫೆಬ್ರವರಿ 25 (ಯು.ಎನ್.ಐ.) ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಮಾರು ಮೂರು ತಿಂಗಳಿನಿಂದ ಅಭಿಮಾನಿಗಳನ್ನು ರಂಜಿಸುತ್ತಿರುವ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಎಂಟನೇ ಸೀಸನ್ ಇಂದು ಶುಕ್ರವಾರ ತರೆಬೀಳಲಿದೆ. ಕೋವಿಡ್ -19 ಕಾರಣದಿಂದಾಗಿ, ಬೇರೆ ರಾಜ್ಯಗಳಲ್ಲಿ ನಡೆಯಬೇಕಾಗಿದ್ದ ಕಬಡ್ಡಿ ಪಂದ್ಯಗಳು ಬೆಂಗಳೂರಿನಲ್ಲೇ ಒಟ್ಟು 136 ಪಂದ್ಯಗಳನ್ನು ನಡೆಸಲಾಯಿತು,

ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಗಳಿಸಿದ್ದ ಪಾಟ್ನಾ ಪೈರೇಟ್ಸ್ ತಂಡ ದಬಾಂಗ್ ಡೆಲ್ಲಿ ಪಿಕೆಎಲ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯ ಬೆಂಗಳೂರಿನ ವೈಟ್‍ ಫೀಲ್ಡ್‍ ನಲ್ಲಿ ನಡೆಯಲಿದೆ.

ಸೀಸನ್ 8 ರಲ್ಲಿ ಪಟ್ನಾ ಪೈರೆಟ್ಸ್ ತಂಡ ಆಡಿದ ಒಟ್ಟು 22 ಪಂದ್ಯಗಳ ಪೈಕಿ 16 ಪಂದ್ಯಗಲ್ಲಿ ಗೆಲುವನ್ನ ಸಾಧಿಸಿ 85 ಪಾಯಿಂಟ್ ಗಳೊಂದಿಗೆ ರ್ಯಾಂಕಿಂಗ್ ಪಟ್ಟಿ ಅಗ್ರ ಸ್ಥಾನವನ್ನ ಕಾಯ್ದುಕೊಂಡಿದೆ. ದಬಂಗ್ ಡೆಲ್ಲಿ ಒಟ್ಟು 22 ಪಂದ್ಯಗಳನ್ನ ಆಡಿದ್ದೂ 12 ಪಂದ್ಯಗಳಲ್ಲಿ ಗೆದ್ದು 75 ಪಾಯಿಂಟ್ ಗಳೊಂದಿಗೆ ಪಟ್ಟಿಯಲ್ಲಿ 2 ನೇ ಸ್ಥಾನವನ್ನ ಕಾಯ್ದುಕೊಂಡಿದೆ.

Share