Connect with us


      




ದೇಶ

ಪ್ರೋ ಕಬ್ಬಡಿ ಲೀಗ್ ವೇಳಾಪಟ್ಟಿ ಪ್ರಕಟ

Vanitha Jain

Published

on

ಬೆಂಗಳೂರು: ಸೆಪ್ಟೆಂಬರ್ 21 (ಯು.ಎನ್.ಐ.) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಬಾರಿ ಪ್ರೋ ಕಬ್ಬಡಿ ಲೀಗ್ (Pro Kabbadi League) ಆರಂಭವಾಗಲಿದ್ದು, ಮಶಾಲ್ ಸ್ಪೋರ್ಟ್ಸ್ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಅ.7ರಿಂದ ನಂತರ 26ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ನಂತರದ ಹಂತದ ಪಂದ್ಯಗಳು ಅ.28ರಿಂದ ನವೆಂಬರ್‌ 7ರವರೆಗೆ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ.

ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಲಾಗಿದ್ದು, ಲೀಗ್ ಮತ್ತಷ್ಟು ಕಳೆಗಟ್ಟಲಿದೆ. ಲೀಗ್‌ನ ಮೊದಲ ಮೂರು ದಿನ, ಪ್ರತಿ ದಿನಕ್ಕೆ ಮೂರು ಪಂದ್ಯಗಳು ನಡೆಯಲಿವೆ. ಪ್ರತಿ ಶುಕ್ರವಾರ ಮತ್ತು ಭಾನುವಾರವೂ ಮೂರು ಪಂದ್ಯಗಳನ್ನು ಆಡಿಸಲಾಗುತ್ತದೆ.

ಅಕ್ಟೋಬರ್ 7 ರ ಮೊದಲ ದಿನ ದಬಾಂಗ್ ಮತ್ತು ಯು ಮುಂಬಾ ಸೆಣಸಲಿದೆ. ಇನ್ನು ಅದೇ ದಿನ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟನ್ಸ್ ಕಾದಾಟಕ್ಕಿಳಿಯಲಿವೆ. ಅಕ್ಟೋಬರ್ 7 ರಂದು ಮೂರು ಪಂದ್ಯಗಳು, ಅಕ್ಟೋಬರ್ 8 (ಶನಿವಾರ) ಮೂರು ಪಂದ್ಯಗಳು, ಅಕ್ಟೋಬರ್ 9 ಎರಡು ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 7 ರ ಮೊದಲ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

Share