ಲಕ್ನೋ: ಜೂನ್ ೦೮ (ಯು.ಎನ್.ಐ.) ಇಲ್ಲಿನ ಬಾಲಕನೋರ್ವ ಆನ್ಲೈನ್ ಗೇಮ್ ಪಬ್ ಜಿ ಆಡುವುದನ್ನು ತಡೆದ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
೧೬ ವರ್ಷ ವಯಸ್ಸಿನ ಬಾಲಕ ಪಬ್ ಜಿ ಆಡುವುದನ್ನು ಗೀಳಾಗಿ ಮಾಡಿಕೊಂಡಿದ್ದ. ಮಗ ಅದರಲ್ಲಿಯೇ ಸಂಪೂರ್ಣ ಮುಳಗಿ ಹೋಗುವುದನ್ನು ತಡೆಯಲು ಅವನ ತಾಯಿ ಪ್ರಯತ್ನಿಸುತ್ತಿದ್ದರು. ಇದು ವಾಗ್ವಾದಕ್ಕೆ ಕಾರಣವಾಗುತ್ತಿತ್ತು. ಪಬ್ ಜಿ ಆಡುವುದನ್ನೇ ತಡೆದ ತಾಯಿ ಮೇಲೆ ಕೋಪಗೊಂಡ ಆತ ತನ್ನ ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದೆ.
ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ನಕಲಿ ಕಥೆ ಕಟ್ಟಿ ಪೊಲೀಸರ ತನಿಖೆ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ಪೊಲೀಸರು ವಿವರವಾಗಿ ಪ್ರಶ್ನಿಸಿದಾಗ ಆತನೇ ಕೊಂದಿರುವುದು ಬೆಳಕಿಗೆ ಬಂದಿದೆ. ಆತನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.