Published
6 months agoon
By
UNI Kannadaಬೆಂಗಳೂರು, ನ. 13(ಯುಎನ್ಐ) ಏಕ್ ಲವ್ ಯಾ ಸಾಂಗ್ ಲಾಂಚ್ ಸಂದರ್ಭದಲ್ಲಾಗಿರುವ ಅಚಾತುರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್ ಟ್ವಿಟರ್ ಮೂಲಕವೂ ಕ್ಷಮೆ ಕೋರಿದ್ದಾರೆ.
ಪುನೀತ್ ನಮಗೆ ಸ್ಫೂರ್ತಿ. ಸಿನಿಮಾ ಕೆಲಸಕ್ಕೆ ಅಪ್ಪು ಪ್ರಾಮುಖ್ಯತೆ ಕೊಡುತ್ತಿದ್ದರು. ಹೀಗಾಗಿಯೇ ಹಾಡಿಗೆ ಮುಂಚೆ ಶ್ರದ್ಧಾಂಜಲಿ ಸಲ್ಲಿಸಿದೆವು. ಅಚಾತುರ್ಯದಿಂದ ಶಾಂಪೇನ್ ಸಂಭ್ರಮ ನಡೆದುಹೋಗಿದೆ ಎಂದಿದ್ದಾರೆ.
ಇವೆಂಟ್ ಮೇನೇಜ್ ಮೆಂಟ್ ನವರು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದ್ದರು. ಅವರಿಗೂ ಈ ಸೂಕ್ಷ್ಮತೆ ತಿಳಿಯಲಿಲ್ಲವೇನೋ ಗೊತ್ತಿಲ್ಲದೆ ತಪ್ಪು ನಡೆದಿದೆ ಕ್ಷಮಿಸಿ ಎಂದಿದ್ದಾರೆ.
‘ಏಕ್ ಲವ್ ಯಾ’ ಚಿತ್ರದ ಮೊದಲ ಹಾಡು ಬಿಡುಗಡೆಗೊಳಿಸಿದ್ದೇ ಅಪ್ಪು. ಹಾಡನ್ನು ಮೆಚ್ಚಿ ರಾಣಾಗೂ ಕರೆ ಮಾಡಿದ್ದರು ಎಂದು ಹೇಳಿದ್ದು, ಅಪ್ಪು ಅವರ ಅಗಲಿಕೆಯ ನೋವು ಇನ್ನೂ ನಮ್ಮ ಮನಸ್ಸಿನಲ್ಲಿದೆ, ಆ ಕಾರಣಕ್ಕೆ 4ರಂದು ಬಿಡುಗಡೆಯಾಗಬೇಕಿದ್ದ ಹಾಡನ್ನು 12ಕ್ಕೆ ಮಾಡಲಾಯಿತು, ಸಮಾರಂಭದ ಉದ್ಘಾಟನೆಯೇ ಅಪ್ಪು ಅವರನ್ನು ನೆನೆಯುತ್ತಾ, ಅವರ ವ್ಯಕ್ತಿತ್ವ ಹಾಗು ಅವರ ಜೊತೆ ಕಳೆದ ಕ್ಷಣಗಳನ್ನು ನೆನೆಯುತ್ತಾ ಶುರುವಾಯಿತು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಗಂಡು ಮಗುವಿನ ತಾಯಾದ ಸಂಜನಾ ಗಲ್ರಾನಿ
ರಿಮೇಕ್ ಆಗುತ್ತಿದೆ ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಅಭಿನಯದ ‘ಆನಂದ್’ ಚಿತ್ರ!
ಮಗಳಿಗೆ ಅದ್ಬುತ ಶುಭಾಶಯ ಕೋರಿದ ಪ್ರಿಯಾ ಕಿಚ್ಚ ಸುದೀಪ್
ಮಂದಣ್ಣ ಕುಟುಂಬ ಪರಿಚಯಿಸಿದ ನಟಿ ರಶ್ಮಿಕಾ ಮಂದಣ್ಣ; ಫೋಟೋ ವೈರಲ್
ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆ ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ
ಪುರುಷರಿಗಿಲ್ಲದ ಸೌಂದರ್ಯ ಮಾನದಂಡ ಮಹಿಳೆಯರಿಗೇಕೆ ? ರಮ್ಯ ಪ್ರಶ್ನೆ