Published
7 months agoon
By
prathamಬೆಂಗಳೂರು: ಅಕ್ಟೋಬರ್ 29 (ಯು.ಎನ್.ಐ.) ಅಕ್ಷರಶಃ ಕನ್ನಡಿಗರ ಕಣ್ಮಣಿಯಾಗಿದ್ದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ. ಬಾರದ ಲೋಕಕ್ಕೆ ಪಯಣಿಸಿದ ಅವರು ಇನ್ನು ಆಕಾಶದ ತಾರೆ.
ಇಂದು ಬೆಳಗ್ಗೆ ಹಠಾರ್ ಹೃದಯಾಘಾತದಿಂದ ಪುನೀತ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಮೊದಲಿನ ಸ್ಥಿತಿಗೆ ತರಲು ವೈದ್ಯರು ತೀವ್ರವಾಗಿ ಪ್ರಯತ್ನಿಸಿದ್ದರು. ಅವರ ಪ್ರಯತ್ನ ವಿಫಲವಾಗಿದೆ. ಇರೊದೊಂದೇ ಜೀವನ ಎಂಬ ಸಂಭಾಷಣೆ ಹೇಳಿದ್ದ ನಡೆದಾಡುವ ತಾರೆ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರು ತುಂಬು ಕುಟುಂಬ ಅಗಲಿದ್ದಾರೆ.
ಇವರ ನಿಧನ ಅವರ ಕುಟುಂಸ್ಥರಿಗೆ, ಅಭಿಮಾನಿಗಳಿಗೆ ಬರಸಿಡಿಲಿನಂತೆ ಎರಗಿದೆ. ಎಲ್ಲರೂ ದಿಗ್ಬ್ರಮೆಗೊಂಡಿದ್ದಾರೆ. ಶೋಕತಪ್ತರಾಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಮುಂದಿನ ಕಾರ್ಯಕ್ರಮಗಳು ಜರುಗುವ ಕುರಿತಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.
UNI, KR