Connect with us


      




ಕಿರುತೆರೆ

ಪುನೀತ್ ನೆನಪಲ್ಲಿ 50 ಕಿಮೀ ಸೈಕಲ್ ಜಾಥಾ – “ಸೈಕಲ್ ರೈಡ್ ಅಂದ್ರೆ ಅಪ್ಪುಗೆ ಇಷ್ಟ” – ಶಿವಣ್ಣ

Iranna Anchatageri

Published

on

ನಟ ಪುನೀತ್ ರಾಜ್‍ಕುಮಾರ್ ಪುಣ್ಯ ನೆನಪಿನಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ದೊರೆತಿದೆ. ಕೆಎಸ್ಆರ್‌ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸರಿಂದ ಜಾಥ ಆಯೋಜನೆಗೊಂಡಿದ್ದು ಅಪ್ಪು ಸಹೋದರ ಶಿವರಾಜ್ ಕುಮಾರ್ ಚಾಲನೆ ನೀಡಿದರು.

ನಟ ಶಿವರಾಜ್ ಕುಮಾರ್

ಕಂಠೀರವ ಸ್ಟೇಡಿಯಂ ನಿಂದ 50 ಕಿಲೋಮೀಟರ್ ಸಾಗಲಿರುವ ಸೈಕಲ್ ಜಾಥದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ. ಹಾಗೂ ಕೆಎಸ್ಆರ್‌ಪಿ, ಬೆಂಗಳೂರು ಸಂಚಾರಿ ಪೊಲೀಸರು ಭಾಗಿಯಾಗಿದ್ದಾರೆ.  “ನಟ ಪುನೀತ್ ರಾಜ್‍ಕುಮಾರ್ ನೆನಪು ಹಾಗೂ ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ” ಎಂಬ ಘೋಷ ವಾಕ್ಯದಡಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಕಂಠೀರವ ಸ್ಟೇಡಿಯಂನಿಂದ ಚಾಲುಕ್ಯ ಸರ್ಕಲ್, ಮೇಖ್ರಿ ಸರ್ಕಲ್‌, ಹೆಬ್ಬಾಳ,  ಬಿಇಎಲ್ ಸರ್ಕಲ್, ಗೊರಗುಂಟೆಪಾಳ್ಯ, ರಾಜ್ ಕುಮಾರ್ ಸಮಾಧಿ ಕಡೆಗೆ ಸಾಗಿ. ಪುನೀತ್ ಸಮಾಧಿ ಬಳಿ ಬ್ರೇಕ್ ಪಡೆದು ನಾಗರಭಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್,  ಬಿಟಿಎಂ ಜಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್, ಮೇಯೋ ಹಾಲ್ ಕಡೆಯಿಂದ ಸಾಗಿ ಪೊಲೀಸ್ ಹಾಕಿ ಗ್ರೌಂಡ್ ನಲ್ಲಿ ಸೈಕಲ್ ಜಾಥ ಅಂತ್ಯಗೊಳ್ಳಲಿದ್ದು, ಒಟ್ಟು 50 ಕಿಲೋಮೀಟರ್ ಸೈಕಲ್ ಜಾಥಾ ಸಾಗಲಿದೆ.

ಪುನೀತ್ ರಾಜ್ ಕುಮಾರ್, ಸಾಂದರ್ಭಿಕ ಚಿತ್ರ

ಜಾಥಾಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ನಟ ಶಿವಣ್ಣ, “ಸೈಕಲ್ ರೈಡ್ ಅಂದ್ರೇ ಅಪ್ಪುಗೆ ತುಂಬಾ ಇಷ್ಟ. ಅಪ್ಪು ಎಲ್ಲೂ ಹೋಗಿಲ್ಲ.. ಇಲ್ಲೇ ಇದ್ದಾನೆ. ಇರ್ತಾನೆ. ಎಲ್ಲರ ಹೃದಯದಲ್ಲೂ ಅಪ್ಪು ಶಾಶ್ವತ. ಅಪ್ಪು ನನಗೆ ಅಣ್ಣನಾಗಿ ಹೋಗಿದ್ದಾನೆ. ನನ್ನ ಹುಟ್ಟು ಹಬ್ಬಕ್ಕೆ ಅಪ್ಪು ಸೈಕಲ್ ಗಿಫ್ಟ್ ಮಾಡಿದ್ದ. ಈ 50 ಕಿಮೀ ಜಾಥಾದಲ್ಲಿ ಅಪ್ಪು ಇದ್ದಿದ್ರೇ ಖಂಡಿತ ಭಾಗವಹಿಸ್ತಿದ್ದ” ಅಂತಾ ಶಿವರಾಜ್ ಕುಮಾರ್ ಸ್ಮರಿಸಿಕೊಂಡರು.

ರವಿಕಾಂತೇಗೌಡ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ

ಇದೇ ವೇಳೆ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, “ನಟ ಪುನೀತ್ ರಾಜ್ ಕುಮಾರ್ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವು ತಂದಿದೆ. ಅಪ್ಪು ಜೊತೆ ನನಗೆ ಒಳ್ಳೆ ಬಾಂಧವ್ಯ ಇತ್ತು. ಅವ್ರಿಲ್ಲ ಅನ್ನೋ ಸುದ್ಧಿ ಕೇಳಿ ನನಗೆ ಶಾಕ್ ಆಯ್ತು. ಮನೆಗೆ ಹೋದ ನನಗೆ ಸುದ್ದಿ ತಡೆದುಕೊಳ್ಳೋಕೆ ಆಗ್ಲಿಲ್ಲ. ಒಬ್ಬ ಐಪಿಎಸ್ ಆಫೀಸರ್ ಆಗಿಯೂ ನಾನು ನನ್ನ ಪತ್ನಿ ಇಬ್ರು ದುಃಖದಿಂದ ಅತ್ವಿ. ನನ್ನ ಕುಟುಂಬದವರೇ ಹೋದ್ರೇನೋ ಅನ್ನೋವಷ್ಟು ನೋವಾಯ್ತು. ಮನೆಗೆ ಹೋದ ತಕ್ಷಣ ನನ್ನ ದುಃಖವೆಲ್ಲಾ ಹೊರ ಹಾಕಿದೆ. ಒಳ್ಳೆ ಸೌಜನ್ಯದ ನಟ ಪುನೀತ್ ರಾಜ್ ಕುಮಾರ್. ಸೌಜನ್ಯದಿಂದ ಬದುಕಿ ಹಲವು ಜನರಿಗೆ ಮಾದರಿಯಾಗಿರುವ ಡಾ. ರಾಜ್ ಕುಮಾರ್ ಅವರ ಕುಟುಂಬದಿಂದ ಬಂದಂತಹ ನಟ ಅಪ್ಪು ಅವ್ರಿಗೆ ಕರ್ನಾಟಕ ರತ್ನ ಅಷ್ಟೇ ಅಲ್ಲಾ ಎಷ್ಟೇ ಬಿರುದು ಕೊಟ್ರೂ ಸರಿಯೇ. ಅವರು ಎಲ್ಲು ಹೋಗಿಲ್ಲ, ನಮ್ಮೆಲ್ಲರ ಮನವನ್ನು ಅಪ್ಪು ಗೆದ್ದಿದ್ದಾರೆ. ಪುನೀತ್ ನಮ್ಮೆಲ್ಲರಲ್ಲಿ ಯಾವಾಗ್ಲೂ ಪುಣ್ಯಾತ್ಮರಾಗಿರ್ತಾರೆ. ನೂರಾರು ಪುನೀತ್ ರಾಜ್ ಕುಮಾರರು ಈ ಶತಮಾನದಲ್ಲಿ ಹುಟ್ಟಲಿ. ಅವರು ಎಲ್ಲ ಯುವಜನತೆಗೆ ಮಾದರಿಯಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಸಂಯಮ, ಬದ್ಧತೆ, ದೊಡ್ಡತನ ಎಲ್ಲೂ ನೋಡಲು ಸಾಧ್ಯವಿಲ್ಲ ಅಂತಾ ರವಿಕಾಂತೇಗೌಡ ತಿಳಿಸಿದರು.

ಅಲೋಕ್ ಕುಮಾರ್, ಎಡಿಜಿಪಿ

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಡಿಜಿಪಿ ಅಲೋಕ್ ಕುಮಾರ್, “ನಾವು ಪೊಲೀಸ್ ಹಾಕಿ ಆಯೋಜನೆ ಮಾಡಿದ್ದೆವು. ಇದಕ್ಕಾಗಿ ಅಪ್ಪುಗೆ ಚಾಲನೆ ನೀಡಲು ಮನವಿ ಮಾಡಿಕೊಂಡಿದ್ದೆವು. ಒಂದೇ ಒಂದು ಮಾತಿಗೆ ಅವ್ರು ಒಪ್ಪಿಕೊಂಡ್ರು. ಅದ್ರೆ ಮರುದಿನವೇ ಪುನೀತ್ ವಿಧಿವಶರಾದರು.‌ ಆದ್ರೆ ಅದು ಸಾಧ್ಯ ಆಗಲಿಲ್ಲ.. ಅಪ್ಪು ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವು ತಂದಿದೆ. ಅಂತಿಮ ದರ್ಶನದ ವೇಳೆ, ಲಕ್ಷಾಂತರ ಜನ ಅಭಿಮಾನಿಗಳು ಬಂದು ನಮನ ಸಲ್ಲಿಸಿದ್ದಾರೆ.. ಅವರ ಅಗಲಿಕೆ ಎಲ್ಲರಿಗೂ ಸಾಕಷ್ಟು ನೋವು ತಂದಿದೆ ಅಂತಾ ಹೇಳಿದರು. ಇದೇ ವೇಳೆ, ವೇದಿಕೆ ಮೇಲೆ ಅಪ್ಪು ಹಾಡನ್ನ ಹಾಡಿದ ಎಡಿಜಿಪಿ ಅಲೋಕ್ ಕುಮಾರ್, “ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ” ಹಾಡು ಹಾಡಿ ಪುನೀತ್ ಅವರನ್ನು ಅಲೋಕ್ ಕುಮಾರ್ ಸ್ಮರಣೆ ಮಾಡಿಕೊಂಡರು.

Continue Reading
Share