Published
6 months agoon
By
Vanitha Jainಚಂಡೀಗಡ: ಜನವರಿ 03(ಯು.ಎನ್.ಐ) ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರತಿಯೊಂದು ಪಕ್ಷಗಳು ಅಭ್ಯರ್ಥಿಗಳ ಅಂತಿಮಗೊಳಿಸುವತ್ತ ಚಿತ್ತ ನೆಟ್ಟಿದ್ದಾರೆ. ಒಟ್ಟಿನಲ್ಲಿ ಪಂಜಾಬ್ ಪ್ರತಿಷ್ಠೆಯ ಕಣವಾಗಿ ಮಾರ್ಪಡುತ್ತಿದ್ದು, ಆಮ್ ಆದ್ಮಿ ಪಕ್ಷ ತನ್ನ ಐವರು ಅಭ್ಯರ್ಥಿಗಳೊಂದಿಗೆ ಏಳನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜ್ಯದ 117 ಸ್ಥಾನಗಳಿಗೆ ಪಕ್ಷವು ಇದುವರೆಗೆ 101 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಪಟ್ಟಿಯ ಪ್ರಕಾರ, ಸುಖಜಿಂದರ್ ರಾಜ್ ಸಿಂಗ್ ಲಾಲಿ ಮಜಿಥಿಯಾ ಮಜಿಥಿಯಾ, ಡಾ ಅಜಯ್ ಗುಪ್ತಾ ಅಮೃತಸರ ಸೆಂಟ್ರಲ್ನಿಂದ, ಡಾ ಕಾಶ್ಮೀರ್ ಸಿಂಗ್ ಸೋಹಲ್ ತರ್ನ್ ತರಣ್ನಿಂದ, ಸುರೀಂದರ್ ಸಿಂಗ್ ಸೋಧಿ ಜಲಂಧರ್ ಕ್ಯಾಂಟ್ನಿಂದ ಮತ್ತು ಡಾ ಬಲ್ಜಿತ್ ಕೌರ್ ಮಲೌಟ್ನಿಂದ ಸ್ಪರ್ಧಿಸಲಿದ್ದಾರೆ.
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿತು ಮತ್ತು 10 ವರ್ಷಗಳ ನಂತರ ಎಸ್ಎಡಿ-ಬಿಜೆಪಿ ಸರ್ಕಾರವನ್ನು ಹೊರಹಾಕಿತ್ತು.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿರೋಮಣಿ ಅಕಾಲಿ ದಳ (ಎಸ್ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ.
ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು; ಶಿಂಧೆ ಬಣ ಸೇರಿದ ಮತ್ತೊಬ್ಬ ಮಿನಿಸ್ಟರ್
ಮಹಾರಾಷ್ಟ್ರ ಸರ್ಕಾರದಲ್ಲಿ ಬಿಕ್ಕಟ್ಟು; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿಂಧೆ ಟೀಂ
ಲೋಕಸಭೆ ಉಪಚುನಾವಣೆ; ಅಖಿಲೇಶ್ ಯಾದವ್ ಗೆ ಮುಖಭಂಗ, ಅರಳಿದ ‘ಕಮಲ’
ಶಿವಸೇನೆ ಬಂಡಾಯ ನಾಯಕರಿಗೆ ಭದ್ರತೆ ಒದಗಿಸಿ: ಮಹಾರಾಷ್ಟ್ರ ರಾಜ್ಯಪಾಲರು
ನೀವು ಎಷ್ಟು ದಿನ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? …ಉಪಸ್ಪೀಕರ್ ಫೋಟೋ ಜೊತೆ ರೆಬೆಲ್ಸ್ ಗೆ ಶಿವಸೇನೆ ಸಂದೇಶ
ನಿಮಗೆ ಧೈರ್ಯವಿದ್ದರೆ ಶಿವಸೇನೆ ಪಕ್ಷ ತೊರೆದು ಚುನಾವಣೆ ಎದುರಿಸಿ: ರೆಬೆಲ್ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು