Connect with us


      
ಸಾಮಾನ್ಯ

ವಿಮಾನದಲ್ಲಿ ಪಾನಮತ್ತರಾಗಿದ್ರಾ ಪಂಜಾಬ್ ಸಿಎಂ? ವಿಮಾನಯಾನ ಸಚಿವರು ಹೇಳಿದ್ದೇನು?

Lakshmi Vijaya

Published

on

ನವದೆಹಲಿ: ಸೆಪ್ಟೆಂಬರ್ 20 (ಯು.ಎನ್.ಐ.) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ದೆಹಲಿ ಪ್ರಯಾಣಿಸುವ ವೇಳೆ ಮದ್ಯಪಾನ ಮಾಡಿದ್ದರೆಂಬ ಕಾರಣದಿಂದ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂಬ ಆರೋಪವನ್ನು ಪರಿಶೀಲಿಸುವುದಾಗಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಹೇಳಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸುವುದು ಮುಖ್ಯ ಎಂದು ಸಚಿವರು ಪ್ರತಿಪಾದಿಸಿದರು.

ಇದು ಅಂತರಾಷ್ಟ್ರೀಯ ನೆಲದಲ್ಲಿ ನಡೆದ ಘಟನೆಯಾಗಿದೆ. ನಾವು ಸತ್ಯವನ್ನು ಪರಿಶೀಲಿಸುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಡೇಟಾವನ್ನು ಒದಗಿಸುವುದು ಲುಫ್ಥಾನ್ಸಾ ಏರ್‌ಲೈನ್‌ಗೆ ಬಿಟ್ಟದ್ದು. ನನಗೆ ಕಳುಹಿಸಲಾದ ವಿನಂತಿಯ ಆಧಾರದ ಮೇಲೆ, ನಾನು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇನೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಸೋಮವಾರ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಲುಫ್ತಾನ್ಸ ವಿಮಾನದಿಂದ ಭಗವಂತ್ ಮಾನ್ ಅವರನ್ನು ಕೆಳಗಿಳಿಸಲಾಯಿತು. ಏಕೆಂದರೆ ಅವರು ಮದ್ಯದ ಸ್ಥಿತಿಯಲ್ಲಿದ್ದರು ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ಪರತಾಪ್ ಸಿಂಗ್ ಬಾಜ್ವಾ ಕೂಡ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಕೋರಿದರು. ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: 2 ದಿನದ ಮಳೆಗೆ ದ್ವೀಪದಂತಾದ ಸ್ಮಾರ್ಟ್ ಸಿಟಿ ಅಲಿಗಢ

ಆಮ್ ಆದ್ಮಿ ಪಕ್ಷ (ಎಎಪಿ) ಪ್ರತಿಪಕ್ಷಗಳ ಆರೋಪವನ್ನು ಆಧಾರರಹಿತ ಮತ್ತು ನಕಲಿ ಎಂದು ತಳ್ಳಿಹಾಕಿದೆ. ಭಗವಂತ್ ಮಾನ್ ಸೋಮವಾರ ಜರ್ಮನಿಯಿಂದ ತಮ್ಮ ಎಂಟು ದಿನಗಳ ಪ್ರವಾಸದಿಂದ ಮರಳಿದರು.  ಅಲ್ಲಿ ಅವರು ಬಂಡವಾಳ ಹೂಡಿಕೆಗಳನ್ನು ಆಕರ್ಷಿಸಲು ಹೋಗಿದ್ದರು.

Continue Reading
Click to comment

Leave a Reply

Your email address will not be published.

Share