Connect with us


      
ದೇಶ

ಪ್ರಧಾನಿಯ ಭೇಟಿ ಮಾಡಲಿದ್ದಾರೆ ಪಂಜಾಬ್ ಸಿಎಂ

Vanitha Jain

Published

on

ಚಂಡೀಗಢ: ಮಾರ್ಚ್ 22 (ಯು.ಎನ್.ಐ.) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮಾರ್ಚ್ 24 ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಮುಖ್ಯಸ್ಥರಾಗಿ ಮಾರ್ಚ್ 16 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾನ್ ಅವರು ಪ್ರಧಾನಿಯೊಂದಿಗಿನ ಮೊದಲ ಭೇಟಿಯಾಗಿದೆ.

ಮಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಗವಂತ್ ಮಾನ್ ಮುಖ್ಯಮಂತ್ರಿಯಾದ ವೇಳೆ ಅಭಿನಂದನೆ ಸಲ್ಲಿಸಿದ್ದರು.

Share