Connect with us


      
ಅಪರಾಧ

ಕೋರ್ಟ್​ನಲ್ಲಿ ಸ್ಫೋಟ ಪ್ರಕರಣ: ಸಂಭಾವ್ಯ ಭಯೋತ್ಪಾದಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದ ಡಿಐಜಿ

Published

on

ನವದೆಹಲಿ: ಡಿ, 24 (ಯು.ಎನ್.​ಐ) ಲುಧಿಯಾನ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿದ ಒಂದು ದಿನದ ನಂತರ ಲಷ್ಕರ್-ಇ-ತೈಯಬಾ ಭಯೋತ್ಪಾದಕರ ಸಂಭವನೀಯ ದಾಳಿ ಕುರಿತು ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳಿಗೆ ಪಂಜಾಬ್‌ನ ಆಂತರಿಕ ಭದ್ರತೆಯ ಪೊಲೀಸ್ ಮಹಾನಿರ್ದೇಶಕರು ಬರೆದ ಪತ್ರ ಇದೀಗ ಲಭ್ಯವಾಗಿದೆ.

ಭಯೋತ್ಪಾದಕರ ಸಂಭಾವ್ಯ ಗುರಿ ರಕ್ಷಣೆ ಇಲಾಖೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಪೊಲೀಸ್ ಸಂಸ್ಥೆಗಳು ಮತ್ತು ನ್ಯಾಯಾಲಯಗಳಾಗಿರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎಚ್ಚರಿಕೆಯನ್ನು ನವೆಂಬರ್ 30 ರಂದು ಡಿಐಜಿ ಆಂತರಿಕ ಭದ್ರತೆಯಿಂದ ಏಜೆನ್ಸಿಗಳು ಮತ್ತು ಪೊಲೀಸ್ ಇಲಾಖೆಗೆ ಕಳುಹಿಸಲಾಗಿದೆ.

ಕೇಂದ್ರೀಯ ಸಂಸ್ಥೆಯೊಂದು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಐಎಸ್ಐ, ಲಷ್ಕರ್-ಎ-ತೈಯಬಾ ಭಯೋತ್ಪಾದಕರಿಗೆ ತರಬೇತಿ ಕೊಟ್ಟು, ಕರ್ತಾರ್‌ಪುರ ಕಾರಿಡಾರ್ ಮೂಲಕ ಭಾರತಕ್ಕೆ ನುಸುಳಲು ನಿರ್ದೇಶನಗಳನ್ನು ನೀಡಿದೆ. ಮುಂದೆ ಪಠಾಣ್‌ಕೋಟ್ ಅಥವಾ ಗುರುದಾಸ್‌ಪುರದಲ್ಲಿ ವಿಧ್ವಂಸಕ ಕೃತ್ಯ ನಡೆಬಹುದು ಎಂದು ಸೂಚಿಸಲಾಗಿದೆ.

ಪತ್ರವು ಮೊಹಮ್ಮದ್ ಗುಲ್ಜಾರ್ ಮಾಘ್ರೆ ಮತ್ತು ಮೊಹಮ್ಮದ್ ಸಹಜದಾ ಬಂದೆ ಎಂಬ ಇಬ್ಬರು ಅಲ್ಟ್ರಾಗಳ ಗುರುತನ್ನು ಬಹಿರಂಗಪಡಿಸಿದೆ.

ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯಾದ ಮುಸ್ಲಿಂ ಜನಬಾಜ್ ಫೋರ್ಸ್‌ನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಶಿಬಿರದ ಮೇಲೆ ಗ್ರೆನೇಡ್ ದಾಳಿಯ ಯೋಜನೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೃಢವಾದ ರೌಂಡ್-ದಿ-ಕ್ಲಾಕ್ ಕೌಂಟರ್ ಕ್ರಮಗಳನ್ನು ಮತ್ತು ಸೂಕ್ತ ತಡೆಗಟ್ಟುವಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಪತ್ರವನ್ನು ಉಲ್ಲೇಖಿಸಿ ಉನ್ನತ ಮೂಲವೊಂದು ತಿಳಿಸಿದೆ.

ಈ ಒಂದು ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಎನ್‌ಐಎ ಮತ್ತು ಇತರ ಏಜೆನ್ಸಿಗಳು ಪ್ರಕರಣದ ತನಿಖೆ ನಡೆಸುತ್ತಿವೆ.

ಅಪರಾಧ

ಮೊಬೈಲ್ ಕಳ್ಳತನ ಆರೋಪ: ಪೊಲೀಸರ ಹೊಡೆತದಿಂದ ಮೃತಪಟ್ಟ ಅಪ್ರಾಪ್ತ

Published

on

ಲಖೀಂಪುರ ಖೇರಿ: ಜನೆವರಿ 24 (ಯು.ಎನ್.ಐ.) ಮೊಬೈಲ್ ಕಳ್ಳತನ ಆರೋಪದ ಮೇಲೆ ಬಾಲಕನ ಚಿಕ್ಕಪ್ಪ ಮತ್ತು ಮೂವರು ಪೊಲೀಸರು ಪೊಲೀಸ್ ಔಟ್‌ಪೋಸ್ಟ್‌ನೊಳಗೆ ಅಮಾನವೀಯವಾಗಿ ಥಳಿಸಿದ ಪರಿಣಾಮ
ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಪೊಲೀಸ್ ಹಿರಿಯ ಅಧಿಕಾರಿಯೊಬ್ಬರಿಗೆ ಕುಟುಂಬ ಸದಸ್ಯರು ಮಗನ ದೇಹದ ಮೇಲಾಗಿರುವ ಗಾಯಗಳನ್ನು ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಕನಿಗೆ ನಿರ್ದಯವಾಗಿ ಥಳಿಸಿದ ಆರೋಪದ ಮೇಲೆ ಖಜುರಿಯಾ ಪೊಲೀಸ್ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಇನ್ನು ಮಗನ ಸಾವಿಗೆ ಪೊಲೀಸರೇ ಕಾರಣ ಎಂದು ಪೋಷಕರು ನೇರ ಹೊಣೆಗಾರರನ್ನಾಗಿಸಿದ್ದಾರೆ.

ಲಖಿಂಪುರ ಖೇರಿ ಎಸ್‌ಎಸ್‌ಪಿ ಸಂಜೀವ್ ಸುಮನ್, ನಾವು ಪೊಲೀಸರ ವಿರುದ್ಧ ಬಂದಿರುವ ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.

ಪಾಲಿಯಾ ವೃತ್ತದ ಅಧಿಕಾರಿ (ಸಿಒ) ಸಂಜಯ್ ನಾಥ್ ತಿವಾರಿ, ಬಾಲಕನ ಕುಟುಂಬವು ಎರಡು ದೂರುಗಳನ್ನು ದಾಖಲಿಸಿದೆ ಮತ್ತು ನಾವು ಆತನ ಚಿಕ್ಕಪ್ಪ ರಾಮ್ ಬಹದ್ದೂರ್ ಮತ್ತು ನೆರೆಹೊರೆಯವರಾದ ರಾಜವೀರ್ ಸಿಂಗ್ ವಿರುದ್ಧ ಐಪಿಸಿಯ ಸೆಕ್ಷನ್ 304 (ಕೊಲೆಗೆ ಸಮನಾಗಿರುವುದಿಲ್ಲ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ಎರಡನೇ ದೂರು ಸಬ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಕಾನ್ಸ್ಟೆಬಲ್ಗಳ ವಿರುದ್ಧವಾಗಿದೆ. ನಾವು ಪ್ರಕರಣವನ್ನು ವಿವರವಾಗಿ ತನಿಖೆ ಮಾಡುತ್ತಿದ್ದೇವೆ ಮತ್ತು ಅದರಂತೆ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಘಟನೆಯ ವಿವರ:

ಮೃತ ಬಾಲಕ ರೈತ ಲಕ್ಷ್ಮಿ ರಾಮ್ ಅವರ ಏಕೈಕ ಮಗ ಮತ್ತು ನಾಲ್ಕು ಒಡಹುಟ್ಟಿದವರಲ್ಲಿ ಕಿರಿಯ. ಜನವರಿ 17 ರಂದು, ಅವರ ಸೋದರಸಂಬಂಧಿಯ ಮೊಬೈಲ್ ಫೋನ್ ಕಾಣೆಯಾಗಿದೆ. ಈ ಸಂಬಂಧ ಬಾಲಕನ ಚಿಕ್ಕಪ್ಪ ರಾಮ್ ಬಹದ್ದೂರ್ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಜನವರಿ 19 ರಂದು ಬಾಲಕನ ಮನೆಗೆ ಹೋಗಿ ಖಜುರಿಯಾ ಪೊಲೀಸ್ ಹೊರಠಾಣೆಗೆ ಅವರನ್ನು ಕರೆದೊಯ್ದರು.

ಸಹೋದರಿ ಹೇಳುವುದೇನು?

ನನ್ನ ಸಹೋದರನನ್ನು ಕೇಳಿಕೊಂಡು ಪೊಲೀಸರು ನಮ್ಮ ಮನೆಗೆ ಬಂದರು. ನನ್ನ ತಾಯಿ ಅವನನ್ನು ಹತ್ತಿರದ ಪೊಲೀಸ್ ಔಟ್‌ಪೋಸ್ಟ್‌ಗೆ ಕರೆದೊಯ್ದರು. ನಂತರ ತಾಯಿಯನ್ನು ಮನೆಗೆ ಕಳುಹಿಸಿ ಕೆಲವು ಗಂಟೆಗಳ ನಂತರ ನನ್ನ ಸಹೋದರನನ್ನು ಕರೆದೊಯ್ಯಲು ನಮಗೆ ಕರೆ ಬಂದಿತು. ಆದರೆ ನನ್ನ ಪೋಷಕರು ಅಲ್ಲಿಗೆ ತಲುಪಿದಾಗ, ಅವರು ಅವನನ್ನು ತೀವ್ರವಾಗಿ ಹೊಡೆದಿದ್ದರು. ಆತ ನೋವಿನಿಂದ ಅಳುವುದನ್ನು ಕಂಡು ಪ್ರಶ್ನಿಸಿದಾಗ ಪೊಲೀಸರು ಮತ್ತು ನನ್ನ ಚಿಕ್ಕಪ್ಪ ತನಗೆ ನಿರ್ದಯವಾಗಿ ಥಳಿಸಿದ್ದಾರೆ ಎಂದು ಹೇಳಿದರು. ತದನಂತರ ಮನೆಗೆ ಕರೆತಂದರು ಮತ್ತು ಅವನ ಸ್ಥಿತಿ ಹದಗೆಟ್ಟ ಕಾರಣ ಅವನನ್ನು ಪಾಲಿಯಾ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ವೇಳೆ ಮೃತಪಟ್ಟನು ಎಂದು ಹೇಳಿದರು.

Continue Reading

ಅಪರಾಧ

‘ನಿಮ್ಮ ಇಲಾಖೆಯಲ್ಲೇ ದೊಡ್ಡ ಭ್ರಷ್ಟರಿದ್ದಾರೆ’ ಅವರನ್ನ ಹಿಡಿಯಿರಿ ಎಂದು ಡಿಸಿಪಿ ಅನೂಪ್ ಶೆಟ್ಟಿಗೆ ಹೇಳಿದ ನೆಟ್ಟಿಗರು !

Published

on

ಬೆಂಗಳೂರು: ಜನೆವರಿ 22 ( ಯು.ಎನ್.ಐ.) ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹಣ ವಂಚನೆ, ಬಂಗಾರ ವಂಚನೆ, ಮನೆ ವಂಚನೆ, ದಾಖಲಾತಿ ವಂಚನೆ ಸಂಬಂಧ ಹೀಗೆ ಸಾಲು ಸಾಲು ದೂರುಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿವೆ.

ಇದೀಗ ವ್ಯಕ್ತಿಯೊಬ್ಬರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಸಾಲ ಪಡೆದುಕೊಂಡಿರುವ ಘಟನೆ ನಡೆದಿದೆ. ಈ ಆರೋಪಿಯು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ವ್ಯಕ್ತಿಯೊಬ್ಬರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಮೊಬೈಲ್ ಮೂಲಕ ಲೋನ್ ಪಡೆದು ವಂಚಿಸಿದ ಆರೋಪಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಟ್ವೀಟ್ ಮಾಡಿದ್ದು, ಆರೋಪಿ ಬಂಧಿಸಿರುವ ಬಗ್ಗೆ ತಿಳಿಸಿದ್ದಾರೆ. ಆದರೆ ಆರೋಪಿಯ ಹೆಸರು, ಊರು ಎಂಬುದು ತಿಳಿದು ಬಂದಿಲ್ಲ. ತನಿಖೆಯ ನಂತರ ಎಲ್ಲಾ ಮಾಹಿತಿ ಬಹಿರಂಗವಾಗಲಿದೆ.

ಆದರೆ ಅನೂಪ್ ಅವರ ಈ ಟ್ವೀಟ್ ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು ಟ್ವೀಟ್ ಮಾಡಿ, ಕಳ್ಳತನ ಮತ್ತು ಮೋಸದ ಜಾಲವನ್ನು ಪತ್ತೆ ಹಚ್ಚಿದಕ್ಕಾಗಿ ಅಭಿನಂದನೆಗಳು. ಮನೆ ಖರೀದಿದಾರರಿಗೆ ಮನೆ ತಲುಪಿಸದೆ ಸಾವಿರಾರು ಕೋಟಿ ಲೂಟಿ ಮಾಡಿದ ಮಂತ್ರಿ ಡೆವಲಪರ್ಸ್ ವಿರುದ್ಧ ನಿಮ್ಮ ಇಲಾಖೆ ಚಾರ್ಜ್ ಶೀಟ್ ಸಲ್ಲಿಸಿದೆಯೇ? ಎಂತಹ ಅವಮಾನ ಎಂದು ಕರ್ನಾಟಕ ಹೋಮ್ ಬಯರ್ಸ್ ಫೋರಮ್ ಪ್ರಶ್ನಿಸಿದೆ.

ರುದ್ರೇಶ್ ಪಿ ಎಂಬುವರು ಟ್ವೀಟ್ ಮಾಡಿ, ನಿಮ್ಮ ಇಲಾಖೆಗಳಲ್ಲೇ ದೊಡ್ಡ ದೊಡ್ಡ ಭ್ರಷ್ಟರು ಇದ್ದಾರೆ ಅವರನ್ನು ಮೊದಲು ಹಿಡಿಯಿರಿ ಸರ್ ಎಂದಿದ್ದಾರೆ.

ನನ್ನ ಬಳಿ ಒಬ್ಬರು ಅಸಭ್ಯವಾಗಿ ಮಾತನಾಡುತ್ತಾರೆ ಎಂದು ದೂರು ನೀಡಲು ಬೆಂಗಳೂರು ಸೈಬರ್ ಕ್ರೈಂಗೆ ಕರೆ ಮಾಡಿದೆ. ಆದರೆ ಇಲ್ಲಿ ಕೇವಲ ಹಣಕಾಸಿನ ನಷ್ಟ, ವಂಚನೆ ಬಗ್ಗೆ ಮಾತ್ರ ದೂರು ತೆಗೆದುಕೊಳ್ಳಲಾಗುತ್ತದೆ ಎಂದು ಉತ್ತರಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಲು ಹೇಳಿದರು ಎಂದು ರಂಗಣ್ಣ ಎಂಬುವವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ

ಸರ್ ನಗರದಲ್ಲಿ ಹೊಸ ಅಪರಾಧ ಪ್ರಕರಣಗಳು ಸಹ ನಡೆಯುತ್ತಿದೆ. ಹಣದ ಅಗತ್ಯವಿರುವ ವ್ಯಕ್ತಿಯನ್ನು ಕೆಲವು ಗುಂಪಿನ ಜನರು ಸಂಪರ್ಕಿಸುತ್ತಾರೆ!. ನೀವು ಕಾರನ್ನು ಗೆದ್ದಿದ್ದೀರಿ ಎಂದು ಪತ್ರವನ್ನು ಕಳುಹಿಸಿ 1ಸಾವಿರ, 3 ಸಾವಿರ ಅಥವಾ 5 ಸಾವಿರ ತೆಗೆದುಕೊಳ್ಳಿ ಎಂದು ಹೇಳಿ ವರ್ಷದ ಅಂತ್ಯದ ವೇಳೆಗೆ ಅವರು 3-5 ಲಕ್ಷ ಸಂಗ್ರಹಿಸುತ್ತಿದ್ದರು. ತಿಂಗಳಿಗೆ 10 ಜನರ ಗುರಿ ಇಟ್ಟುಕೊಂಡು ಕೃತ್ಯ ನಡೆಸುತ್ತಿದ್ದಾರೆ ಎಂದು ಅಪರಾಧದ ಬಗ್ಗೆ ವರುಣ್ ಸಿ ಎಂಬುವವರು ಮಾಹಿತಿ ನೀಡಿದ್ದಾರೆ.

Continue Reading

ಅಪರಾಧ

ಅಪರಾಧ ಕೃತ್ಯಗಳಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿ ವಜಾಗೊಳಿಸುವುದೇ ಸೂಕ್ತ

Published

on

By

ಬೆಂಗಳೂರು ಜ ೨೦(ಯುಎನ್ ಐ) ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ನಗರದ ಚಾಮರಾಜಪೇಟೆಯ ಸಂಚಾರಿ ಪೊಲೀಸ್ ಠಾಣೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದ ಇಬ್ಬರು ಪೊಲೀಸ್ ಪೇದೆಗಳು ಗಾಂಜಾ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ದೂರುಗಳು ಕೇಳಿಬಂದಿದ್ದು, ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದುಅಸಮಧಾನವ್ಯಕ್ತಪಡಿಸಿದರು. ಕೆಲವೇ ಕೆಲವು ಪೊಲೀಸರು ಇಂತಹ ಕೃತ್ಯದಲ್ಲಿ ಶಾಮೀಲಾಗುವುದರಿಂದ ಇತರ ದಕ್ಷ ಸಿಬ್ಬಂದಿಯಲ್ಲಿ ನಂಬಿಕೆಯೇ ಇಲ್ಲದಂತಾಗುತ್ತದೆ ಎಂದರು.
ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಇಲಾಖೆಯಿಂದಲೇ ಶಾಶ್ವತವಾಗಿ ವಜಾ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಗಾಂಜಾ ಮಾರಾಟದಲ್ಲಿ ಭಾಗಿಯಾಗಿರುವ ಪೊಲೀಸರ ಕುರಿತು ಸಂಪೂರ್ಣ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Continue Reading
Advertisement
ದೇಶ22 mins ago

ಅಧಿಕೃತವಾಗಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಕಂಪೆನಿ ಹಸ್ತಾಂತರ

ನವದೆಹಲಿ: ಜನೆವರಿ 27  (ಯು.ಎನ್.ಐ.) ಕೇಂದ್ರ ಸರ್ಕಾರವು ಗುರುವಾರ ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಿದೆ. 69 ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್...

ಕರ್ನಾಟಕ46 mins ago

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ...

ದೇಶ60 mins ago

ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ದುಷ್ಟರು

ನವದೆಹಲಿ: ಜನೆವರಿ 27 (ಯು.ಎನ್.ಐ.) ವೈಯಕ್ತಿಕ ದ್ವೇಷದ ಕಾರಣ ಮಹಿಳೆಯನ್ನು ಅಪಹರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಟರು ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು...

ಕರ್ನಾಟಕ2 hours ago

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ...

ಕರ್ನಾಟಕ2 hours ago

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ....

ದೇಶ3 hours ago

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ; ಶಾಲಾ-ಕಾಲೇಜುಗಳು ಬಂದ್

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ  ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು...

ಕ್ರೀಡೆ3 hours ago

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್...

ಸಿನೆಮಾ4 hours ago

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ...

ದೇಶ4 hours ago

ಅನ್ಯ ಜಾತಿ ಹುಡುಗಿ ಮದುವೆಯಾದ ಮಗ: ತಾಯಿ ಮೇಲೆ ಹಲ್ಲೆ

ಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ...

ಸಿನೆಮಾ4 hours ago

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ...

ಟ್ರೆಂಡಿಂಗ್

Share