Connect with us


      




ದೇಶ

ಪಂಜಾಬ್​: ವಿದ್ಯುತ್ ದರ ಪ್ರತಿ ಯುನಿಟ್​​ಗೆ 3 ರೂಪಾಯಿ ಕಡಿತ

pratham

Published

on

ಚಂಡೀಗಢ: ನ. 1(ಯುಎನ್ಐ) ವಿದ್ಯುತ್ ದರವನ್ನು 3 ರೂಪಾಯಿ ಕಡಿತಗೊಳಿಸಲು ಸಂಪುಟ ನಿರ್ಧರಿಸಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸೋಮವಾರ ಹೇಳಿದ್ದಾರೆ.

ಸರ್ಕಾರದ ಈ ಕ್ರಮವು ಪಂಜಾಬ್‌ನ 95 ಪ್ರತಿಶತ ನಿವಾಸಿಗಳಿಗೆ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಘೋಷಣೆ ಮಾಡಿದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ನಾವು ಇಂದು ಖರೀದಿಸಿದ ವಿದ್ಯುತ್ ದರ 2.65 ರೂ. ಇದೆ. ನಾವು ಸಮೀಕ್ಷೆ ನಡೆಸಿದಾಗ, ಜನರು ನಮಗೆ ಉಚಿತ ವಿದ್ಯುತ್​ ಬೇಡ, ಆದರೆ ಅಗ್ಗದ ವಿದ್ಯುತ್ ಬೇಕು ಎಂದು ಹೇಳಿದರು. ವಿದ್ಯುತ್ ದರವನ್ನು ಯೂನಿಟ್‌ಗೆ 3 ರೂ. ಇಳಿಸುವುದರಿಂದ ಬೊಕ್ಕಸಕ್ಕೆ ವಾರ್ಷಿಕ 3,316 ಕೋಟಿ ರೂ. ಹೊರೆ ಬೀಳಲಿದೆ ಎಂದು ಸಿಎಂ ಹೇಳಿದ್ದಾರೆ.

Share