Connect with us


      
ಸಾಮಾನ್ಯ

ಪಿವಿಎಲ್ ಚಾಂಪಿಯನ್ಸ್ ಕೊಲ್ಕತ್ತಾ ಥಂಡರ್ ಬೋಲ್ಟ್ಸ್, ನಟ ವಿಜಯ್ ದೇವರಕೊಂಡರಿಂದ ಪ್ರಶಸ್ತಿ ಪ್ರಧಾನ

UNI Kannada

Published

on

ಹೈದರಬಾದ್: ಫೆಬ್ರವರಿ 28 (ಯು.ಎನ್.ಐ.) ಪ್ರೈಮ್ ವಾಲಿಬಾಲ್ ಲೀಗ್ (ಪಿವಿಎಲ್) ಪಂದ್ಯಾವಳಿಯಲ್ಲಿ ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ಚಾಂಪಿಯನ್ ಆಗಿದ್ದಾರೆ. ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡ 3–0 (15–13, 15–10, 15–12) ಸೆಟ್‌ಗಳಿಂದ ಅಹಮದಾಬಾದ್ ಡಿಫೆಂಡರ್ಸ್ ತಂಡವನ್ನು ಮಣಿಸಿತು.

ಕೋಲ್ಕತ್ತಾದ ಆಟಗಾರ ವಿನೀತ್ ‘ಪ್ಲೇಯರ್ ಆಫ್ ದಿ ಫೈನಲ್’ ಪ್ರಶಸ್ತಿ ಪಡೆದರು ರೋಚಕ ಫೈನಲ್‌ ಪಂದ್ಯದಲ್ಲಿ ನಿರ್ಣಾಯಕ ಹಂತದ ಕ್ಷಣದಲ್ಲಿ ಕೋಲ್ಕತ್ತಾ ಆಟಗಾರರು ಪಾಯಿಂಟ್‌ಗಳನ್ನು ಗೆದ್ದು ಸತತ ಸೆಟ್‌ಗಳನ್ನು ಗೆದ್ದರು. ವಿನೀತ್ ‘ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್’ ಪ್ರಶಸ್ತಿಗೆ ಭಾಜನರಾದೆ, ಎಸ್ ವಿ ಗುರುಪ್ರಶಾಂತ್ (ಹೈದರಾಬಾದ್ ಬ್ಲಾಕ್ ಹಾಕ್ಸ್) ‘ಎಮೆರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್’ಪ್ರಶಸ್ತಿಗೆ ಪಡೆದರು, ಅಂಗಮುತ್ತು (ಅಹಮದಾಬಾದ್ ಡಿಫೆಂಡರ್ಸ್) ‘ಬೆಸ್ಟ್ ಸ್ಪೈಕರ್ ಆಫ್ ದಿ ಸೀಸನ್ ‘, ಜಾನ್ ಜೋಸೆಫ್ (ಹೈದರಾಬಾದ್ ಬ್ಲಾಕ್ ಹಾಕ್ಸ್ )’ ಬ್ಲಾಕರ್ ಆಫ್ ದಿ ಸೀಸನ್’ಶಾನ್ ಜಾನ್ (ಅಹಮದಾಬಾದ್ ಡಿಫೆಂಡರ್ಸ್) ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದರು. ಖ್ಯಾತ ಚಿತ್ರನಟ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿದರು.

 

Share