Connect with us


      




ಕರ್ನಾಟಕ

ಕಲ್ಲುಗಣಿಗಾರಿಕೆ ಸ್ಥಳೀಯರಿಗೇ ಅನುಕೂಲ ; ನಿಯಮ ತಿದ್ದುಪಡಿ

Kumara Raitha

Published

on

ಬೆಂಗಳೂರು, ಸೆಪ್ಟೆಂಬರ್ ೨೨ (ಯು.ಎನ್.ಐ.) ತೀರ್ಥಹಳ್ಳಿ ಬಂಡೆ ಕಾರ್ಮಿಕರ ನಿಯೋಗವೊಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ  ನೇತೃತ್ವ ದಲ್ಲಿ, ಇಂದು ಗಣಿ ಇಲಾಖೆ ಸಚಿವ  ಹಾಲಪ್ಪ ಆಚಾರ ಅವರನ್ನು ಇಂದು ಭೇಟಿಯಾಗಿ, ಕಲ್ಲು ಗಣಿಗಾರಿಕಯನ್ನೇ ನಂಬಿಕೊಂಡಿರುವ ವರು, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆ ನಡೆಸಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ ಬಂಡೆ ಕಲ್ಲು ಗಣಿಗಾರಿಕೆ ಯನ್ನು,  ಕಳೆದ ಎಂಟು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಮಿಕರ ಹಿತ ಕಾಯಲು ಅನುವಾಗುವಂತೆ, ಟೆಂಡರ್ ಷರತ್ತುಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಿದರು.

ಇಡೀ ಜಿಲ್ಲೆಗೆ ಅನ್ವಯವಾಗುವಂತೆ ಇರುವ, ಪ್ರಸ್ತುತ ಟೆಂಡರ್ ನಿಯಮಾವಳಿಗಳು ಸ್ಥಳೀಯ ಕಾರ್ಮಿಕರಿಗೆ ಪ್ರತಿಕೂಲವಾಗಿದ್ದು, ಪರಂಪರಾಗತ ವಾಗಿ ಕಲ್ಲು ಗಣಿಕಾರಿಕೆ ನಡೆಸಿಕೊಂಡು ಬಂದಿರುವ ಕಾರ್ಮಿಕ ಕುಟುಂಬಗಳು, ಬೀದಿ ಪಾಲಾಗುವ ಆತಂಕ ಎದುರಿಸುತ್ತಿದ್ದಾರೆ.

ಟೆಂಡರ್ ನಿಯಮಾವಳಿಗೆ ತಿದ್ದುಪಡಿ ಮಾಡಿ, ಗಣಿಗಾರಿಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸ್ಥಳೀಯರಿಗೆ, ಬಂಡೆ ಯ ಸಮೀಪ ಇರುವ ನಿವಾಸಿಗಳಿಗೆ ಹಾಗೂ ಸಂಘಗಳಿಗೆ ಮಾತ್ರ ಅವಕಾಶ ಸೀಮಿತಗೊಳಿಸಬೇಕು ಎಂದು ಸಚಿವರು ವಿನಂತಿಸಿದರು.

ಸಚಿವರ ಮನವಿಗೆ ಸ್ಪಂದಿಸಿದ, ಗಣಿ ಸಚಿವ ಹಾಲಪ್ಪ ಆಚಾರ ಅವರು, ಇದಕ್ಕೆ ಪೂರಕವಾಗಿ, ಒಂದು ವಾರದಲ್ಲಿಯೇ ನಿಯಮಾವಳಿ ಗಳಿಗೆ ತಿದ್ದುಪಡಿ ತಂದು, ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಗಣಿ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಹಾಗೂ ಇಲಾಖೆಯ  ಇತರ ಹಿರಿಯ ಅಧಿಕಾರಿಗಳೂ ಉಪಸ್ತಿತರಿದ್ದರು.

Share