Connect with us


      




ರಾಜಕೀಯ

ಉದ್ದೇಶಪೂರ್ವ ಗಲಾಟೆ ಮಾಡಿದ ಕಾಂಗ್ರೆಸ್ ಸಂಸದ: ಅಶ್ವಥ್ ನಾರಾಯಣ್

Kumara Raitha

Published

on

ಬೆಂಗಳೂರು: ಜನೆವರಿ 04 (ಯು.ಎನ್.ಐ.) ರಾಮನಗರದ ಡಿಸಿ ಕಚೇರಿಯಲ್ಲಿ ಕಾರ್ಯಕ್ರಮವಿತ್ತು. . ಅಂಬೇಡ್ಕರ್ ಪ್ರತಿಮೆ ಕೂಡ ನೆನೆಗುದಿಗೆ ಬಿದ್ದಿತ್ತು. ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಸಿಎಂ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಜಿಲ್ಲಾಧಿಕಾರಿಯವರೇ  ಶಿಷ್ಟಾಚಾರದಂತೆ  ಆಹ್ವಾನಿಸಿದ್ದರು. ಎಲ್ಲರಿಗೂ ಆಹ್ವಾನ ನೀಡಿದ್ದರು. ಪುಷ್ಪಾರ್ಚನೆಗೆ ಮೂರು ಜನ ಮಾತ್ರ ಅವಕಾಶವಿತ್ತು. ನಾನು,ಸಿಎಂ,ಶಾಸಕಿಯವರು ಭಾಗಿಯಾದೆವು. ಅಲ್ಲಿಗೆ ನನ್ನನ್ನ ಕರೆಯಲಿಲ್ಲ ಅಂತ ಸಂಸದ ಡಿ.ಕೆ. ಸುರೇಶ್  ವಾದಮಾಡಿದ್ರು. ಮೊದಲಿಗೆ ಸಂಸದರು ಅಲ್ಲಿ ಇರಲಿಲ್ಲ. ನಾವು ಮುಗಿಸಿ ಬಂದ ನಂತರ ಅವರು ಆಗಮಿಸಿದ್ರು ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಅವರು ಇಂದು ವಿಕಾಸಸೌಧದಲ್ಲಿ ಸುದ್ದಿಗಾರರೊಮದಿಗೆ ಮಾತನಾಡಿದರು. ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಗಲಾಟೆ ಮಾಡಿದ ಹಿನ್ನೆಲೆ ವಿವರಿಸಿದರು. ಡಿ.ಕೆ. ಸುರೇಶ್ ಅವರು ಸಿಎಂ ಇದ್ದಾಗ ಹೇಗೆ ನಡೆದುಕೊಳ್ಳಬೇಕು, ಸ್ಥಳೀಯ ಪ್ರತಿನಿಧಿಯಾಗಿ ಹೇಗೆ ನಡೆದುಕೊಳ್ಳಬೇಕು ಹಾಗೆ ನಡೆದುಕೊಳ್ಳಲಿಲ್ಲ. ಸಭಾ ಕಾರ್ಯಕ್ರಮದಲ್ಲಿ ಡಿಕೆಡಿಕೆ ಅಂತ ಘೋಷಣೆ ಇತ್ತು ಸುಮ್ಮನಿರಿ ಎಂದ್ರೂ ಯಾರು ಕೇಳಲಿಲ್ಲ. ಅವರ ಭಂಟರು,ಹಿಂಬಾಲಕರು ಸೇರಿ ಗಲಾಟೆ ಮಾಡಿದ್ರು. ಘೋಷಣೆ ಕೂಗೋಕೆ ಸೇರಿಸಿಕೊಳ್ತಾರೆ ಎಂದ ಸಚಿವರು ಡಿಕೆ ಬ್ರದರ್ಸ್ ವಿರುದ್ಧ ಅಶ್ವಥ್ ನಾರಾಯಣ್ ಗರಂ ಆದರು.

ಕಾಂಗ್ರೆಸ್ ಸಿಎಂ ಇದ್ದಾಗ ಇದೇ ರೀತಿ ಮಾಡ್ತಿದ್ರಾ? ಪದೇ ಪದೇ ಘೋಷಣೆ ಕೂಗ್ತಿದ್ರು. ಕೂಗಿ ಕೂಗಿ ನಮ್ಮನ್ನ ಕೆಣಕಿದ್ದಾರೆ. ಬೇಕು ಎಂದೇ ಈ ರೀತಿಯಾಗಿ ಮಾಡಿದ್ದಾರೆ. ನಿಮ್ಮ ಗಂಡಸ್ಥನಕ್ಕೆ,ಯೋಗ್ಯತೆಗೆ ಸರಿಯಿಲ್ಲ ಡಿಕೆಶಿ,ಅವರ ಭಂಡರಿಗೆ ನೇರವಾಗಿ ಹೇಳ್ತೇನೆ; ನಿಮ್ಮ ಪುಂಡಾಟಿಕೆಗೆ ನಾವು ಸಹಿಸಲ್ಲ. ಕೆಲಸವಿದ್ದರೆ ಹೇಳಲಿ ಮಾಡೋಣ. ನಾವು ಮಾಡಿದ ಕೆಲಸ ಹೇಳಿಕೊಂಡಿದ್ದೇವೆ. ಇವರನ್ನ ಕೇಳಿ ನಾವು ಮಾತನಾಡಬೇಕಾ? ಹಲ್ಲೆಯನ್ನ ಮಾಡೋಕಾ ನೀವು ಬರೋದು? ಇವತ್ತು ಏನು ಬೇಕಾದ್ರೂ‌ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ಅಂತಹ ಕೆಲಸ ನಾವು ಮಾಡಿಲ್ಲ ಎಂದು ಹೇಳಿದರು.

ಗಲಾಟೆ ಮಾಡಿ ಕಳಿಸೋಣ ಎಂಬ ಉದ್ದೇಶ ಅವರದಿತ್ತು. ಅಣ್ಣ ತಮ್ಮನಿಗೆ ಛೀಮಾರಿ ಹಾಕಬಹುದಿತ್ತು. ಆದರೆ ನನಗೂ ರಾಮನಗರಕ್ಕೂ ಏನು ಸಂಬಂಧ ಅಂತಾರೆ. ನಾನು ಸಚಿವ ಎಲ್ಲಿಗೆ ಬೇಕಾದ್ರೂ‌ಹೋಗ್ತೇನೆ. ನಾನು ನಿಮಗಿಂತ ಹೆಚ್ಚು ಜಿಲ್ಲೆಗೆ ಸೇರಿದವನು. ಇವರೇನು ಪ್ರಜಾಪ್ರಭುತ್ವದಲ್ಲಿದ್ದಾರಾ?. ಬೇಡವಾದ ಅಪಾದನೆಗಳನ್ನ ಮಾಡ್ತಾರೆ. ಕುತ್ತಿಗೆ ಕೂಯ್ದು ಕುತಂತ್ರ ಮಾಡಿ ರಾಜಕಾರಣ ಮಾಡಿದವರು. ಇವರು ತಂತ್ರ,ಕುತಂತ್ರದಲ್ಲೇ ಬಂದವರು. ಇವರ ಹಿನ್ನೆಲೆ ಇಡೀ ನಾಡಿಗೆ ಗೊತ್ತಿದೆ ಎಂದು ಡಿಕೆ ಬ್ರದರ್ಸ್ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಅವರಿಗೆ ಅಲ್ಲಿ ಅಭದ್ರತೆ ಕಾಡಿರಬಹುದು. ಅದಕ್ಕೆಂದೇ ನಿನ್ನೆ ಆ ರೀತಿ ಮಾಡಿದ್ದಾರೆ. ರಾಮನಗರ ಇವರಿಗಷ್ಟೇ ಸೇರಿದ್ದಲ್ಲ. ನನಗೂ ಅಷ್ಟೇ ಅಧಿಕಾರ ಇದೆ. ಇವರಿಗಿಂತ ಹೆಚ್ಚಿನ ಸಂಬಂಧ ನನಗಿದೆ. ರಾಮನಗರದಲ್ಲಿ ಇವರಿಗಿಂತ ನನಗೆ ಓನರ್ ಶಿಪ್ ಹೆಚ್ಚಿದೆ ಎಂದು ಡಿಕೆ ಬ್ರದರ್ಸ್ ಗೆ ತಿರುಗೇಟು ನೀಡಿದರು.

Share