Connect with us


      




ಸಿನೆಮಾ

‘ಗರಡಿ’ಯಲ್ಲಿ ಪಟ್ಟುಹಾಕಲು ಸಿದ್ಧರಾದ ರಚಿತಾ ರಾಮ್

Vanitha Jain

Published

on

ಬೆಂಗಳೂರು, ಡಿಸೆಂಬರ್ 7, (ಯು.ಎನ್.ಐ): ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಿರ್ದೇಶಕ ಯೋಗರಾಜ್ ಭಟ್ ಅವರ ‘ಗರಡಿ’ ಮನೆ ಸೇರಿದ್ದಾರೆ.

ಹೌದು ಸ್ಯಾಂಡಲ್‍ವುಡ್ ಕ್ರಿಯೆಟಿವ್ ನಿರ್ದೇಶಕ ಯೋಗರಾಜ್ ಅವರು ಗರಡಿ ಎಂಬ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾಕ್ಕೆ ರಚಿತಾರಾಮ್ ಅವರನ್ನು ನಾಯಕಿ ನಟಿಯಾಗಿ ಆಯ್ಕೆ ಮಾಡಲಾಗಿದೆ.

ಈ ವಿಚಾರವನ್ನು ಖುದ್ದಾಗಿ ಯೋಗರಾಜ್ ಭಟ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬಹಿರಂಗಪಡಿಸಿದ್ದು, ಗರಡಿಗೆ ಸ್ವಾಗತ ರಚಿತಾರಾಮ್ ಎಂದು ಅವರ ಚಿತ್ರತಂಡಕ್ಕೆ ರಚಿತಾರಾಮ್ ಅವರನ್ನು ಸ್ವಾಗತಿಸಿದ್ದಾರೆ.

ಈ ಸಿನಿಮಾವನ್ನು ಬಿ.ಸಿ ಪಾಟೀಲ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ನಾಯಕರಾಗಿ ಯಶಸ್ ಸುರ್ಯ ಅವರು ಬಣ್ಣ ಹಚ್ಚುತ್ತಿದ್ದಾರೆ. ರಚಿತಾರಾಮ್ ಕೂಡ ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಗರಡಿಯಲ್ಲಿ ರಚಿತಾ ಪಟ್ಟು! ಎಂದು ಸಿನಿಮಾ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾಕ್ಕೆ ವಿ. ಹರಿಕೃಷ್ಣ ಸಂಗೀತ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಜೊತೆಯಾಗಲಿದೆ.

Share