Connect with us


      




ಕರ್ನಾಟಕ

ಮುರುಘಾ ಶರಣರಿಂದ ಇಷ್ಟಲಿಂಗದೀಕ್ಷೆ ಪಡೆದ ರಾಹುಲ್ ಗಾಂಧಿ

Vanitha Jain

Published

on

ಚಿತ್ರದುರ್ಗ: ಆಗಸ್ಟ್ 03 (ಯು.ಎನ್.ಐ.) ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಇಂದು ವಿದ್ಯುಕ್ತವಾಗಿ ಇಷ್ಟಲಿಂಗದೀಕ್ಷೆ ಪಡೆದುಕೊಳ್ಳುವ ಮೂಲಕ ಶರಣ ತತ್ವಗಳಿಗೆ ಗೌರವ ಸಮರ್ಪಿಸಿದರು.

ಚಿತ್ರದುರ್ಗಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗದೀಕ್ಷೆ ಪಡೆದರು. ತದನಂತರ ಅಲ್ಲಿನ ಮಠಾಧೀಶರ ಆಶೀರ್ವಾದ ಪಡೆದು ಸಂವಾದ ನಡೆಸಿದರು.

ಕಾಯಕ, ದಾಸೋಹ, ಸಮಾನತೆ ಎಂಬ ಬಸವತತ್ವಗಳನ್ನು ಕಾಂಗ್ರೆಸ್ ಪಕ್ಷ ಅಳವಡಿಸಿಕೊಂಡಿದೆ, ಶ್ರೀ ರಾಹುಲ್ ಗಾಂಧಿ ಅವರೂ ಸಹ ಈ ತತ್ವಗಳನ್ನು ಅನುಸರಿಸುವ ಮೂಲಕ ಬಸವಾದಿ ಶರಣರನ್ನು ಗೌರವಿಸಿಕೊಂಡು ಬಂದಿದ್ದಾರೆ. ಇಂದು ರಾಹುಲ್ ಗಾಂಧಿಯವರು ವಿದ್ಯುಕ್ತವಾಗಿ ಲಿಂಗದೀಕ್ಷೆ ಪಡೆಯುವ ಮೂಲಕ ಶರಣ ತತ್ವಗಳಿಗೆ ಗೌರವ ಸಮರ್ಪಿಸಿದರು ಎಂದು ಕಾಂಗ್ರೆಸ್ ಹೇಳಿದೆ.

Share