Connect with us


      
ದೇಶ

ಮೋದಿ ಸರ್ಕಾರ ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆಯನ್ನು ಹತ್ತಿಕ್ಕುತ್ತಿದೆಯೇ?

Iranna Anchatageri

Published

on

ಸಾಂಧರ್ಭಿಕ ಚಿತ್ರ

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಟ್ವಿಟರ್‌ಗೆ ಪತ್ರ ಬರೆದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಟ್ವಿಟ್ಟರ್ ಖಾತೆಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರದ ಒತ್ತಡಕ್ಕೆ ಮಣಿದು ತಮ್ಮ ಧ್ವನಿಯನ್ನು ಅಡಗಿಸುವ ಸಲುವಾಗಿ ತಮ್ಮ ಟ್ವಿಟರ್‌ ಫಾಲೋವರ್ ಗಳ ಮೇಲೆ ಅಘೋಷಿತ ನಿರ್ಬಂಧ ಹೇರಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಡಿಸೆಂಬರ್‌ನಲ್ಲಿ ಟ್ವಿಟರ್ ಸಿಇಒ ಪರಾಗ್ ಅಗರ್‌ವಾಲ್‌ಗೆ ಬರೆದಿರುವುದಾಗಿ ತಿಳಿಸಿದ್ದಾರೆ. ಪತ್ರದಲ್ಲಿ, “ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಭಾಷಣ ತಡೆಯುವಲ್ಲಿ ಟ್ವಿಟರ್ ಪಾತ್ರವಿದೆ ಎಂದು ನಾನು ಭಾವಿಸುತ್ತೇನೆ. ಈ ಅಂಶವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನನ್ನ ಧ್ವನಿಯನ್ನು ಹತ್ತಿಕ್ಕಲು ಸರ್ಕಾರದಿಂದ ಟ್ವಿಟರ್ ಇಂಡಿಯಾದಲ್ಲಿ ಸಾಕಷ್ಟು ಒತ್ತಡವಿದೆ ಎಂದು ಜನರು ನನಗೆ ಹೇಳಿದ್ದಾರೆ’ ಎಂದಿದ್ದಾರೆ.

“ವಿಶ್ವಾದ್ಯಂತ ಉದಾರ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಿಗಳ ನಡುವಿನ ಸೈದ್ಧಾಂತಿಕ ಯುದ್ಧವು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಹೀಗಿರುವಾಗ ಟ್ವಿಟರ್ ನಂತಹ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿ ಕುಳಿತವರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ನನ್ನ ಟ್ವಿಟ್ಟರ್ ಫಾಲೋವರ್ಸ್‌ಗಳ ಬೆಳವಣಿಗೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿರುವುದು ಆಘಾತಕಾರಿ. ನನಗೆ 2 ಕೋಟಿ ಫಾಲೋವರ್ಸ್ ಇದ್ದಾರೆ. ನನ್ನ ಟ್ವಿಟ್ಟರ್ ಖಾತೆಯು ಸಕ್ರಿಯವಾಗಿದ್ದು ಜುಲೈ 2021ರಲ್ಲಿ ಪ್ರತಿದಿನ 8-10 ಸಾವಿರ ಅನುಯಾಯಿಗಳು ಹೆಚ್ಚುತ್ತಲೇ ಇದ್ದಾರೆ” ಎಂದು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ 9 ವರ್ಷದ ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೋವನ್ನು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಇಂತಹ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿತ್ತು. ಇದಾದ ಬಳಿಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ 8 ದಿನಗಳ ಕಾಲ ಬ್ಯಾನ್ ಮಾಡಲಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಬಾಲಕಿಯ ಪೋಷಕರ ಅನುಮತಿ ಮೇರೆಗೆ ಫೋಟೋ ಶೇರ್ ಮಾಡಿರುವುದಾಗಿ ತಿಳಿಸಿದ್ದರು. ನಂತರ ರಾಹುಲ್ ಗಾಂಧಿ ಟ್ವಿಟ್ಟರ್ ಅಕೌಂಟ್ ಮೇಲಿದ್ದ ನಿಷೇಧವನ್ನು ತೆಗೆದು ಹಾಕಲಾಗಿತ್ತು.

ರಾಹುಲ್ ಗಾಂಧಿ, ಆಗಸ್ಟ್‌ನಿಂದ ಅವರ ಸರಾಸರಿ ಮಾಸಿಕ ಅನುಯಾಯಿಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಅಲ್ಲದೆ, ಆಗಸ್ಟ್ ಬಳಿಕ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುವುದು ನಿಂತಿದೆ. ಇದು ಆಕಸ್ಮಿಕವಾಗಿ ಆಗಿರುವುದಲ್ಲ. ಆಗಸ್ಟ್ ತಿಂಗಳಲ್ಲಿ ನಾನು ದೆಹಲಿ ಅತ್ಯಾಚಾರ ಸಂತ್ರಸ್ತೆಯ ವಿಚಾರ, ರೈತರೊಂದಿಗೆ ಒಗ್ಗಟ್ಟು ಪ್ರದರ್ಶನ ಮತ್ತು ಇತರ ಅನೇಕ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಡಿದ್ದೇನೆ. ಇಂತಹ ಸಂದರ್ಭದಲ್ಲಿ ನನ್ನ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಿದ್ದು ಏಕೆ ಎಂದು ಪ್ರಶ್ನಿಸಿರುವ ಅವರು, ಸರ್ಕಾರಿ ಟ್ವಿಟ್ಟರ್ ಖಾತೆಗಳು ಸೇರಿದಂತೆ ಅನೇಕರು ಅದೇ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ, ಅವರ ಖಾತೆಯನ್ನು ಬ್ಯಾನ್ ಮಾಡಿಲ್ಲ ಎಂದು ಆರೋಪಿಸಿರುವ ಅವರು, ಭಾರತದ ವಿಚಾರಗಳನ್ನು ವಿನಾಶ ಮಾಡುವುದರಲ್ಲಿ ನೀವು ಪಾತ್ರಧಾರಿಗಳಾಗಬೇಡಿ. ಇದು ಶತಕೋಟಿಗೂ ಹೆಚ್ಚು ಭಾರತೀಯರ ಪರವಾಗಿ ಈ ಪತ್ರ ನಿಮಗೆ ಬರೆದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Share