Connect with us


      




ದೇಶ

ಮುಖ್ಯೋಪಾಧ್ಯಾಯ ಸೇರಿ 9 ಶಿಕ್ಷಕರಿಂದ 4 ವಿದ್ಯಾರ್ಥಿನಿಯರ ಮೇಲೆ ಗ್ಯಾಂಗ್ ರೇಪ್

Iranna Anchatageri

Published

on

ರಾಜಸ್ಥಾನ, ಡಿ 9 (ಯುಎನ್ಐ) ಶಿಕ್ಷಕರು ಎಂದರೇ ವಿದ್ಯಾರ್ಥಿಗಳಿಗೆ ದಿಕ್ಸೂಚಿಯಂತೆ ಇರಬೇಕು. ಆದರೆ ಇಲ್ಲಿ ವಿದ್ಯೆಯನ್ನ ಕಲಿಸಬೇಕಾದ ಗುರುಗಳೇ ನೀಚ ಕೆಲಸಕ್ಕೆ ಕೈ ಹಾಕಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನಾಲ್ವರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಿಗಿದ ಆರೋಪವನ್ನು ಮುಖ್ಯೋಪಾಧ್ಯಾಯ ಸೇರಿ ಒಟ್ಟು 9 ಮಂದಿ ಶಿಕ್ಷಕರು ಎದುರಿಸುತ್ತಿದ್ದಾರೆ.

ಈ ಹೀನ ಕೃತ್ಯ ರಾಜಸ್ಥಾನದ ಆಳ್ವಾಸ್ ಬಿವಾಡಿ ಪ್ರಾಂತ್ಯದಲ್ಲಿ ನಡೆದಿದೆ. ಕಳೆದ ವರ್ಷ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಹೋದ್ಯೋಗಿಯನ್ನು ಜೈಲಿಗಟ್ಟಿದ್ದ ಜಿದ್ದಿನಿಂದಾಗಿ 9 ಜನ ಶಿಕ್ಷಕರು 4 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ್ದಾರೆಂದು SIT ತಂಡ ತಿಳಿಸಿದೆ. ವಿಶೇಷವೆಂದರೆ ಮಹಿಳಾ ಶಿಕ್ಷಕಿಯು ಇದಕ್ಕೆ ಸಾಥ್ ನೀಡಿದ್ದಾರೆ ಎಂಬ ಆರೋಪವೂ ಇದೆ.

ಲೈಂಗಿ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ ಮೇಲೆ ಈ ಘಟನೆಯೂ ಬೆಳಕಿಗೆ ಬಂದಿದೆ. 10 ನೇ ತರಗತಿಯಲ್ಲಿ ಓದಿತ್ತಿರುವ ವಿದ್ಯಾರ್ಥಿನಿಯೂ ತನ್ನ ಶಾಲೆಯಲ್ಲಿ ಶಿಕ್ಷಕ ಮತ್ತು ಮುಖ್ಯೋಪಾದ್ಯಾರು ಸೇರಿ 1 ವರ್ಷದಿಂದ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿದ್ದಾರೆ. ಶಿಕ್ಷಕರಿಗೆ ಸಹಕರಿಸಿ ಇಬ್ಬರು ಶಿಕ್ಷಕಿಯರು ವೀಡಿಯೋಗಳನ್ನು ಮಾಡುತ್ತಿದ್ದರುಬೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ 3 ಬೇರೆ ಬೇರೆ ಕೇಸುಗಳನ್ನು ಧಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂದನ್ ಪೊಲೀಸ್ ಸ್ಟೇಷನ್ ಅಧಿಕಾರಿ ತಿಳಿಸಿದ್ದಾರೆ. ಪ್ರಿನ್ಸಿಪಾಲ್ ಸೇರಿ ಸರ್ಕಾರಿ ಶಾಲೆಯ ಶಿಕ್ಷಕರ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Share