Connect with us


      
ಸಾಮಾನ್ಯ

‘ನಾವು ಎಲ್ಲೇ ಹೋದರೂ ನಿಮ್ಮೊಂದಿಗೆ’ ಶೇನ್ ವಾರ್ನ್ ನೆನೆದು ಭಾವುಕರಾದ ರಾಜಸ್ಥಾನ ರಾಯಲ್ಸ್

Vanitha Jain

Published

on

ಮುಂಬೈ: ಮಾರ್ಚ್ 30 (ಯು.ಎನ್.ಐ.) 2008ರಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಕೋಚ್, ಮಾರ್ಗದರ್ಶಕ ಮತ್ತು ನಾಯಕರಾಗಿ ಇಡೀ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದ ಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಅವರನ್ನು ನೆನೆದು ಇಡೀ ತಂಡ ಭಾವುಕಗೊಂಡಿದೆ.

ರಾಜಸ್ಥಾನ್ ರಾಯಲ್ಸ್ ತಮ್ಮ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯಗಳಿಸಿದ ನಂತರ, ತಂಡವು ದಂತಕಥೆಯನ್ನು ನೆನಪಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡ ಕುಳಿತಿದ್ದ ಸ್ಥಳದಲ್ಲಿ ಆಸೀಸ್ ದಿಗ್ಗಜರ ಪೋಸ್ಟರ್ ಅಂಟಿಸಲಾಗಿದೆ. ಪೋಸ್ಟ್‌ನ ಚಿತ್ರವನ್ನು ರಾಜಸ್ಥಾನ ರಾಯಲ್ಸ್ ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಅದು ವೈರಲ್ ಆಗಿದೆ.

ಪೋಸ್ಟರ್ ನಲ್ಲಿ ಫಾರೆವರ್ ದಿ ಫಸ್ಟ್ ರಾಯಲ್ ಎಂಬ ಬರಹವಿದೆ. ಚಿತ್ರವನ್ನು ಹಂಚಿಕೊಂಡ ರಾಜಸ್ತಾನ್ ರಾಯಲ್ಸ್ ತಂಡ ನಾವು ಎಲ್ಲಿಗೆ ಹೋದರೂ ನಮ್ಮೊಂದಿಗೆ ಎಂದು ಹೇಳಿದ್ದಾರೆ

ಇತ್ತೀಚೆಗಷ್ಟೇ ಥಾಯ್ಲೆಂಡ್ ನಲ್ಲಿ ಹೃದಯಾಘಾತದಿಂದ ವಾರ್ನ್ ನಿಧನರಾದರು. ವಾರ್ನ್ ಅವರ ಹಠಾತ್ ನಿಧನವು ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿತು

ಇದಕ್ಕೂ ಮುನ್ನ ನಾಯಕ ಸಂಜು ಸ್ಯಾಮ್ಸನ್ (27ಕ್ಕೆ 55), ದೇವದತ್ ಪಡಿಕ್ಕಲ್ (29ಕ್ಕೆ 41) ಮತ್ತು ಶಿಮ್ರಾನ್ ಹೆಟ್ಮೆಯರ್ (13ಕ್ಕೆ 32) ಅವರ ಅದ್ಭುತ ದಾಳಿಯ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 210/6 ಸ್ಕೋರ್ ಮಾಡಿತು. ಸ್ಯಾಮ್ಸನ್, ಪಡಿಕ್ಕಲ್ ಮತ್ತು ಹೆಟ್ಮೆಯರ್ ಮೂವರ ಹೊರತಾಗಿ, ಜೋಸ್ ಬಟ್ಲರ್ (28 ಎಸೆತಗಳಲ್ಲಿ 35) ಮತ್ತು ಯಶಸ್ವಿ ಜೈಸ್ವಾಲ್ (16 ಎಸೆತಗಳಲ್ಲಿ 20) ಸಹ ಬ್ಯಾಟಿಂಗ್‌ನೊಂದಿಗೆ ಅಮೂಲ್ಯ ಕೊಡುಗೆ ನೀಡಿದರು.

ಗೆಲ್ಲಲು 211 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಎಸ್‌ಆರ್‌ಎಚ್ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಕೇನ್ ವಿಲಿಯಮ್ಸನ್ (2), ಅಭಿಷೇಕ್ ಶರ್ಮಾ (9), ರಾಹುಲ್ ತ್ರಿಪಾಠಿ (0), ನಿಕೋಲಸ್ ಪೂರನ್ (0) ಹೈದರಾಬಾದ್‌ಗೆ ಗೆಲುವು ತಂದುಕೊಡುವುದರಲ್ಲಿ ವಿಫಲರಾದರು. ನಂತರ ಏಡೆನ್ ಮಾರ್ಕ್ರಾಮ್ (41 ಎಸೆತಗಳಲ್ಲಿ 57), ರೊಮಾರಿಯೊ ಶೆಫರ್ಡ್ (18 ಎಸೆತಗಳಲ್ಲಿ 24) ಮತ್ತು ವಾಷಿಂಗ್ಟನ್ ಸುಂದರ್ (14 ಎಸೆತಗಳಲ್ಲಿ 40) ಕಠಿಣ ಪ್ರಯತ್ನ ಮಾಡಿದರು

Share