Connect with us


      
ದೇಶ

ರಜನಿಕಾಂತ್‌ ಆಸ್ಪತ್ರೆಗೆ ದಾಖಲು

pratham

Published

on

ಚೆನ್ನೈ, ಅ  29(ಯುಎನ್‌ ಐ) -ತಮಿಳು  ಚಿತ್ರ ರಂಗದ   ಸೂಪರ್‌ ಸ್ಟಾರ್‌   ರಜನಿಕಾಂತ್  ಅವರನ್ನು ಗುರುವಾರ   ರಾತ್ರಿ    ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.   ನಿಯಮಿತ  ಆರೋಗ್ಯ  ತಪಾಸಣೆಗಾಗಿ   ಅವರು   ಖಾಸಗಿ ಆಸ್ಪತ್ರೆಗೆ   ದಾಖಲಾಗಿದ್ದು,   ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು  ಹೇಳಿವೆ.
2020ರಲ್ಲಿ, ರಜನಿಕಾಂತ್​  ಅವರಿಗೆ   ಅನಾರೋಗ್ಯ ಉಂಟಾಗಿ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದರು.  ಇದಾದ ಕೆಲವು ದಿನಗಳ ನಂತರ, ಅವರು 2021ರಲ್ಲಿ ತಮಿಳುನಾಡು  ವಿಧಾನಸಭಾ  ಚುನಾವಣೆಗೆ  ಮುನ್ನ  ಪ್ರಾರಂಭಿಸಲು ಯೋಜಿಸಿದ್ದ ರಾಜಕೀಯ ಪಕ್ಷ  ಆರಂಭಿಸುವುದಿಲ್ಲ   ಎಂದು ಅವರು ಘೋಷಿಸಿದ್ದರು.

ಮೊನ್ನೆಯಷ್ಟೆ   ದೆಹಲಿಯಲ್ಲಿ   ಉಪ ರಾಷ್ಟ್ರಪತಿ   ವೆಂಕಯ್ಯ  ನಾಯ್ಡು   ಅವರಿಂದ     ರಜನಿಕಾಂತ್‌     ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಸ್ವೀಕರಿಸಿದ್ದರು. ಪ್ರಶಸ್ತಿ ಪಡೆಯಲು   ದೆಹಲಿಗೆ ತೆರಳಿದ್ದ ಅವರು  ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್,  ಪ್ರಧಾನಿ ನರೇಂದ್ರ ಮೋದಿ ಅವರನ್ನು  ಸೌಜನ್ಯಪೂರ್ವಕವಾಗಿ  ಭೇಟಿ ಮಾಡಿದ್ದರು.

Share