Connect with us


      
ಸಿನೆಮಾ

‘777 ಚಾರ್ಲಿ’ ವೀಕ್ಷಿಸಿದ ರಜಿನಿಕಾಂತ್! ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ!

Iranna Anchatageri

Published

on

ಬೆಂಗಳೂರು: ಜೂನ್ 22 (ಯು.ಎನ್.ಐ.) ಪ್ರಾಣಿಪ್ರಿಯರಿಗೆ ಇಷ್ಟವಾಗುವ ಹಾಗೂ ಮನುಷ್ಯ ಮತ್ತು ನಾಯಿಗಳ ಸಂಬಂಧವಿರುವ, ಅದ್ಭುತ ಕಥಾಹಂದರವುಳ್ಳ ಚಿತ್ರವನ್ನು ಸೂಪರ್ ಸ್ಟಾರ್ ರಜಿನೀಕಾಂತ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಜಿನಿಕಾಂತ್ ದೂರವಾಣಿ ಕರೆ ಮಾಡಿ ತಿಳಿಸಿರುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಈ ಕುರಿತು ಸ್ವತಃ 777 ಚಾರ್ಲಿ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ, ದಿನದ ಅದ್ಭುತ ಆರಂಭ! ಎಂದು ಹಣೆಬರಹ ಹೊಂದಿರುವ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. “ರಜನಿಕಾಂತ್ ಸರ್ ಅವರಿಂದ ಕರೆ ಬಂತು. ಅವರು ನಿನ್ನೆ ರಾತ್ರಿ #777ಚಾರ್ಲಿಯನ್ನು ವೀಕ್ಷಿಸಿದರು. ಚಿತ್ರದ ಬಗ್ಗೆ ವಿಸ್ಮಯ ವ್ಯಕ್ತಪಡಿಸಿದ್ದಾರೆ. ಚಿತ್ರದ ಮೇಕಿಂಗ್ ಗುಣಮಟ್ಟ, ಆಳವಾದ ಕಥೆ ವಿನ್ಯಾಸಗಳ ಬಗ್ಗೆ ಹೆಚ್ಚು ಮಾತನಾಡಿದರು. ವಿಶೇಷವಾಗಿ ಕ್ಲೈಮ್ಯಾಕ್ಸ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಎಂದು ರಕ್ಷಿತ್ ಶೆಟ್ಟಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

777 ಚಾರ್ಲಿ ಚಿತ್ರದ ಬಗ್ಗೆ ಅಭೂತಪೂರ್ವ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಥಿಯೇಟರ್ ನಲ್ಲಿ ಚಿತ್ರ ವೀಕ್ಷಿಸಿ, ಬಳಿಕ ತೆರಿಗೆ ಮುಕ್ತಗೊಳಿಸಿದ್ದರು.

Share