Connect with us


      




ಸಿನೆಮಾ

ಮಗಳು ಸೌಂದರ್ಯ ಮತ್ತು ಮೊಮ್ಮಗ ವೀರ್ ಜೊತೆ ರಜನಿಕಾಂತ್

Lakshmi Vijaya

Published

on

ಚೆನ್ನೈ: ಸೆಪ್ಟೆಂಬರ್ 21 (ಯು.ಎನ್.ಐ.) ಮಂಗಳವಾರ ತನ್ನ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸೌಂದರ್ಯ ರಜನಿಕಾಂತ್ , ಬರ್ತ್ ಡೇ ಸೆಲಬ್ರೇಷನ್ ನ ಒಂದು ದಿನದ ನಂತರ ತಮ್ಮ ಮಗನೊಂದಿಗೆ ಕುಟುಂಬದ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.  ಅವರು ತಮ್ಮ ಮಗ ವೀರ್ ಮತ್ತು ತಮ್ಮ ತಂದೆ ನಟ ರಜನಿಕಾಂತ್ ಅವರೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

“ನಿನ್ನೆ ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಲು ಸಮಯ ತೆಗೆದುಕೊಂಡ ಪ್ರತಿಯೊಬ್ಬ ವ್ಯಕ್ತಿಗೆ ತುಂಬಾ ಧನ್ಯವಾದಗಳು. ದೇವರುಗಳು ನನಗೆ ಈ ವರ್ಷ ಅತ್ಯುತ್ತಮ ಉಡುಗೊರೆಯನ್ನು ನೀಡಿ ಆಶೀರ್ವದಿಸಿದ್ದಾರೆ. ನನ್ನ ಮಗ ವೀರ್ .. ಈ ಅದ್ಭುತ ದೇವರ ಮಗುವನ್ನು ಯಾವಾಗಲೂ ನನ್ನ  ಹಿಂದೆ ಹೊಂದಿರುವುದು ಜೀವನದ ನಿಜವಾದ ಆಶೀರ್ವಾದವಾಗಿದೆ.” ಎಂದು ಪೋಸ್ಟ್ ಹಾಕಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸೌಂದರ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಾವು ಮತ್ತು ಅವರ ಪತಿ ವಿಶಗನ್ ವನಂಗಮುಡಿ ಒಟ್ಟಿಗೆ ಮಗನನ್ನು ಸ್ವಾಗತಿಸಿದ್ದಾರೆ ಎಂದು ಘೋಷಿಸಿದರು.

ಈ ಸುದ್ದಿಯನ್ನೂ ಓದಿ: ಪ್ರಮೋಷನ್ ಮಾಡಲಿಲ್ಲವೆಂದು ಬಾಸ್ ಕುಟುಂಬದ ಹತ್ಯೆ; 8 ವರ್ಷದ ಬಳಿಕ ಬಂಧನ

ಸೌಂದರ್ಯ ರಜನಿಕಾಂತ್ ಅವರು ಫೆಬ್ರವರಿ, 2019 ರಲ್ಲಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾದರು. 1999 ರಿಂದ ಚಿತ್ರರಂಗದಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದ ಸೌಂದರ್ಯ ಅವರು ಕೊಚ್ಚಡೈಯಾನ್ ಮತ್ತು ವೆಲೈಯಿಲ್ಲ ಪಟ್ಟಧಾರಿ 2 ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ ಆರ್ ಅಶ್ವಿನ್ ಅವರನ್ನು ಮದುವೆಯಾಗಿದ್ದರು. ಅವರೊಂದಿಗೆ  ವೇದ್ ಎಂಬ 7 ವರ್ಷದ ಮಗನನ್ನು ಪಡೆದಿದ್ದಾರೆ.

Share