Connect with us


      




ಸಿನೆಮಾ

ಹಾಸ್ಯನಟ ರಾಜು ಶ್ರೀವಾಸ್ತವ ಅಂತ್ಯಕ್ರಿಯೆ ನಾಳೆ

Vanitha Jain

Published

on

ನವದೆಹಲಿ: ಸೆಪ್ಟೆಂಬರ್ 21 (ಯು.ಎನ್.ಐ.) ದೆಹಲಿಯ ಏಮ್ಸ್ ನಲ್ಲಿ ಕೊನೆಯುಸಿರೆಳೆದ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 22ರ ಗುರುವಾರ ಬೆಳಿಗ್ಗೆ 9.30ಕ್ಕೆ ನಡೆಯಲಿದೆ.

ರಾಜು ಶ್ರೀವಾಸ್ತವ್ ಅವರ ಕುಟುಂಬ ಸದಸ್ಯರಾದ ಅವರ ಪತ್ನಿ ಶಿಖಾ, ಮಗ ಆಯುಷ್ಮಾನ್ ಮತ್ತು ಮಗಳು ಅಂತರಾ ಮತ್ತು ಸಂಬಂಧಿಕರು ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿ ನಡೆಸಲು ನಿರ್ಧರಿಸಿದೆ.

ರಾಜು ಶ್ರೀವಾಸ್ತವ್ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 1 ಗಂಟೆಗೆ ಕುಟುಂಬಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ. ತದನಂತರ ಇಂದು ದ್ವಾರಕಾ ಬಳಿಯ ದಶರತ್ಪುರಿಗೆ ಕೊಂಡೊಯ್ಯಲಾಗುವುದು. ರಾಜು ಅವರ ಕಿರಿಯ ಸಹೋದರ ದೀಪು ಶ್ರೀವಾಸ್ತವ್ ಮತ್ತು ಹಿರಿಯ ಸಹೋದರ ಸಿಪಿ ಶ್ರೀವಾಸ್ತವ್ ಸಂಜೆ ವೇಳೆಗೆ ಏಮ್ಸ್ ತಲುಪಲಿದ್ದಾರೆ.

ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ ಎಂದು ರಾಜು ಅವರ ಸೋದರ ಮಾವ ಖಚಿತಪಡಿಸಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, “ಬೆಳಿಗ್ಗೆ ಅವರ ಬಿಪಿ ಕಡಿಮೆಯಾಯಿತು ಮತ್ತು ನಂತರ ಅವರಿಗೆ ಸಿಪಿಆರ್ ನೀಡಲಾಯಿತು. ಮೊದಲಿಗೆ ಅವರು ಅದಕ್ಕೆ ಪ್ರತಿಕ್ರಿಯಿಸಿದರು ಆದರೆ ನಂತರ ಕುಸಿದುಬಿದ್ದರು. ವೆಂಟಿಲೇಟರ್ ಅನ್ನು 2-3 ದಿನಗಳಲ್ಲಿ ತೆಗೆದುಹಾಕಬೇಕಿತ್ತು ಎಂದು ಮಾಹಿತಿ ನೀಡಿದರು.

Share