Connect with us


      




ದೇಶ

ಶೀಘ್ರದಲ್ಲೇ ವಾಣಿಜ್ಯ ಹಾರಾಟ ನಡೆಸಲಿದೆ ‘ಆಕಾಶ ಏರ್’

Lakshmi Vijaya

Published

on

ನವದೆಹಲಿ: ಜುಲೈ 07 (ಯು.ಎನ್.ಐ.) ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ವಾಣಿಜ್ಯ ವಿಮಾನ ಹಾರಾಟ ಪ್ರಾರಂಭಿಸಲು ವಾಯುಯಾನ ನಿಯಂತ್ರಕದ ಅನುಮತಿಯನ್ನು ಪಡೆದುಕೊಂಡಿದೆ ಎಂದು ಕಂಪನಿಯು ಬಿಲಿಯನೇರ್ ಮತ್ತು ಏಸ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ತಿಳಿಸಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಟ್ವೀಟ್ ಮಾಡಿದ್ದಾರೆ.

“ನಮ್ಮ ಏರ್ ಆಪರೇಟರ್ ಸರ್ಟಿಫಿಕೇಟ್ (AOC) ರಶೀದಿಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಮಹತ್ವದ ಮೈಲಿಗಲ್ಲು, ಮಾರಾಟಕ್ಕೆ ನಮ್ಮ ವಿಮಾನಗಳನ್ನು ತೆರೆಯಲು ಮತ್ತು ವಾಣಿಜ್ಯ ಕಾರ್ಯಾಚರಣೆಗಳ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ಆಕಾಶ ಏರ್ ಟ್ವೀಟ್ ಮಾಡಿದೆ.

ಎಓಸಿ ಒಂದು ಹೊಸ ಏರ್‌ಲೈನ್‌ಗೆ ವಾಣಿಜ್ಯ ವಿಮಾನಹಾರಾಟ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುಮತಿಸುತ್ತದೆ.

ಆಕಾಶ್ ಏರ್ ಲೈನ್  ಕಳೆದ ತಿಂಗಳು ತನ್ನ ಮೊದಲ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಸ್ವೀಕರಿಸಿದೆ. ಈ ತಿಂಗಳ ಕೊನೆಯಲ್ಲಿ ಎರಡು ವಿಮಾನಗಳೊಂದಿಗೆ ಹಾರಾಟವನ್ನು ಪ್ರಾರಂಭಿಸುವುದಾಗಿ ಕಂಪನಿಯು ಇಂದು ಹೇಳಿಕೆಯಲ್ಲಿ ತಿಳಿಸಿದೆ. ತರುವಾಯ ಪ್ರತಿ ತಿಂಗಳು ಹೆಚ್ಚಿನ ವಿಮಾನಗಳನ್ನು ಪಡೆಯಲಿದೆ.

2023 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಆಕಾಶ ಏರ್ 18 ವಿಮಾನಗಳನ್ನು ಮತ್ತು ನಂತರ ಪ್ರತಿ 12 ತಿಂಗಳಿಗೊಮ್ಮೆ 12-14 ವಿಮಾನಗಳನ್ನು ಪಡೆಯಲಿದೆ.  ಕಂಪನಿಯು ಒಟ್ಟು 72 ವಿಮಾನಗಳನ್ನು ಆರ್ಡರ್ ಮಾಡಿದೆ.

Share