Connect with us


      




ಸಿನೆಮಾ

ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಟ್ರೇಲರ್ ಬಿಡುಗಡೆ

Lakshmi Vijaya

Published

on

ಮುಂಬೈ:ಜೂನ್ 21 (ಯು.ಎನ್.ಐ.) ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನದ ಟ್ರೇಲರ್ ಬಿಡುಗಡೆಯಾಗಿದೆ. ಕೆಲವೊಮ್ಮೆ ಸಹೋದರನಾಗಿರುವುದು ಸೂಪರ್ ಹೀರೋ ಆಗುವುದಕ್ಕಿಂತ ದೊಡ್ಡದಾಗಿದೆ ಎಂಬುದು ಟ್ರೇಲರ್ ಪ್ರಮುಖ ಅಂಶವಾಗಿದೆ.

  ಟ್ರೇಲರ್ ನೋಡಿದ್ರೆ,  ಅಕ್ಷಯ್ ಕುಮಾರ್ ಪಾತ್ರವು ಭೂಮಿ ಪೆಡ್ನೇಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದೆ. ಆದರೆ ಅವರು ಅಕ್ಷಯ್ ಅವರ ಮೂವರು ಸಹೋದರಿಯರ ವಿವಾಹದ ನಂತರ ಮಾತ್ರ ಮದುವೆಯಾಗುವುದು.  ಅಕ್ಷಯ್  ಪಾತ್ರವು ತನ್ನ ಸಹೋದರಿಯರನ್ನು ಮದುವೆ ಮಾಡಲು ಮತ್ತು ಅವರಿಗೆ ಅರ್ಹವಾದ ಜೀವನವನ್ನು ನೀಡಲು ಮುಂದಾಗುವ ಕಥಾಹಂದರ ಒಳಗೊಂಡಿದೆ.  ಈ ಚಲನಚಿತ್ರವು ಸಮಾಜದಲ್ಲಿನ ವರದಕ್ಷಿಣೆಯ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. ಮತ್ತು ತಮ್ಮ ಗುರಿಗಳನ್ನು ಪೂರೈಸಲು ವೈಯಕ್ತಿಕ ಮತ್ತು ಆರ್ಥಿಕ ಸವಾಲುಗಳನ್ನು ಜಯಿಸುವ ಕುಟುಂಬದ ಸಹೋದರನ ಕಾರ್ಯಗಳನ್ನ ಸುತ್ತ ಕಥೆ ಸುತ್ತುತ್ತದೆ.

ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡುವ ಮೊದಲು ಅಕ್ಷಯ್ ಕುಮಾರ್ ಚಿತ್ರದ ಈ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾಗಿರುವುದು ಎಂದರೆ ಪರಸ್ಪರರ ರಹಸ್ಯಗಳು, ಸಂತೋಷಗಳು, ಸಂತೋಷ ಮತ್ತು ಹೃದಯಗಳನ್ನು ತಿಳಿದುಕೊಳ್ಳುವುದು. ಒಗ್ಗಟ್ಟಿನ ಜೀವನ. ಮತ್ತು ಕುಟುಂಬವಿಲ್ಲದೆ ಜೀವನ ಏನು. ಬನ್ನಿ ಈ ಸುಂದರ ಕುಟುಂಬಕ್ಕೆ ಸೇರಿಕೊಳ್ಳಿ. ನಾವು ನಿಮಗಾಗಿ ಕಾಯುತ್ತಿದ್ದೇವೆ ಎಂದು ಪೋಸ್ಟರ್ ಜೊತೆಗೆ ಬರೆದಿದ್ದಾರೆ.

ಚಿತ್ರವನ್ನು ಆನಂದ್ ಎಲ್ ರೈ ನಿರ್ದೇಶಿಸಿದ್ದಾರೆ. ಭೂಮಿ ಪೆಡ್ನೇಕರ್ ಅಕ್ಷಯ್ ಕುಮಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 2021 ರ ಅತ್ರಾಂಗಿ ರೇ ಚಿತ್ರದ ನಂತರ ಇದು ಅಕ್ಷಯ್ ಕುಮಾರ್ ಅವರು ಆನಂದ್ ಎಲ್ ರೈ ಅವರ ನಿರ್ದೇಶನದಲ್ಲಿ ಕಾಣಿಸಿಕೊಳ್ಳುತ್ತಿರೋ ಎರಡನೇ ಚಿತ್ರ. ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದ ನಂತರ ಇದು ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಅವರ ಎರಡನೇ ಸಿನಿಮಾ.

ರಕ್ಷಾ ಬಂಧನ್ ಚಿತ್ರ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾದೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಘರ್ಷಣೆಯಾಗಲಿದೆ. ಎರಡೂ ಚಿತ್ರಗಳು ಈ ವರ್ಷ ಆಗಸ್ಟ್ 11 ರಂದು ಬಿಡುಗಡೆಯಾಗಲಿವೆ ಮತ್ತು ಎರಡೂ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿವೆ.

Share