Connect with us


      
ಜಾನಪದ

“ಒಂದೆಡೆ ಜಮೀರ್, ಮತ್ತೊಂದೆಡೆ ರಮ್ಯಾ ಗುಂಪು” – ಆರ್.ಅಶೋಕ್

Iranna Anchatageri

Published

on

ಬೆಂಗಳೂರು: ಮೇ 13 (ಯು.ಎನ್.ಐ.) ಒಂದು ಕಡೆ ಜಮೀರ್ ಗುಂಪು ಮತ್ತೊಂದು ಕಡೆ ರಮ್ಯಾ ಗುಂಪಿನಿಂದಾಗಿ ಕಾಂಗ್ರೆಸ್ ನಲ್ಲಿ ಬಣಗಳ ದೊಡ್ಡ ಟೀಮ್ ರೆಡಿಯಾಗ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್  ಹೇಳಿದರು.

ವಿಧಾನಸೌಧದಲ್ಲಿ ರಮ್ಯಾ ಟ್ವೀಟ್ ವಾರ್ ವಿಚಾರವಾಗಿ ಮಾತನಾಡಿದ ಆರ್ ಅಶೋಕ್, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಇಲ್ಲ ಅಂತ ಗೊತ್ತಾಗುತ್ತಿದೆ. ಕಾಂಗ್ರೆಸ್ ಗೊಂದಲದ ಗೂಡಾಗಿದ್ದು, ಹೊಂದಾಣಿಕೆಯೇ ಇಲ್ಲ.  ಟಿಕೆಟ್ ಯಾರಿಗೆ ಅಂತ ಗೊತ್ತಿಲ್ಲ ಟವೆಲ್ ಹಾಕುವುದಕ್ಕೆ ಹೋಗಿ ಈ ಗಲಾಟೆ ಪ್ರಾರಂಭ ಆಗಿದೆ ಎಂದರು.

ಒಂದು ಕಡೆ ಜಮೀರ್ ಗುಂಪು ಮತ್ತೊಂದು ಕಡೆ ರಮ್ಯಾ ಗುಂಪು. ದೆಹಲಿಯಲ್ಲಿ ಜಿ 23 ಗ್ಯಾಂಗ್ ಇದೆ. ಈಗ ಕರ್ನಾಟಕದಲ್ಲಿ ಕೆ 23 ಗ್ಯಾಂಗ್ ಪ್ರಾರಂಭ ಆಗುತ್ತದೆ. ಈಗ ಒಂದು ಮೂರು ಜನ ಸೇರಿಕೊಂಡಿದ್ದಾರೆ ಟ್ವಿಟರ್ ಗೆ. ಇಲ್ಲೂ ಕೂಡ ಕೆ 23 ಗ್ಯಾಂಗ್ ಪ್ರಾರಂಭ ಆಗುವುದಕ್ಕೆ ಕುಮಾರಿ ರಮ್ಯಾ ಮುಹೂರ್ತ ಇಟ್ಟಿದ್ದಾರೆ. ಬಣಗಳ ದೊಡ್ಡ ಟೀಮ್ ಕಾಂಗ್ರೆಸ್ ನಲ್ಲಿ ರೆಡಿ ಆಗ್ತಿದೆ ಇದಕ್ಕೆ ರಮ್ಯ ಮುಹೂರ್ತ ಇಟ್ಟಿದ್ದಾರೆ ಎಂದು ಕಂದಾಯ ಸಚಿವರು ಹೇಳಿದರು.

Share