Connect with us


      
ಜಾನಪದ

ಬಾಂಗ್ಲಾ ನಟಿಗೆ ಅತ್ಯಾಚಾರ ಬೆದರಿಕೆ; ರಾಜೀನಾಮೆ ನೀಡಿದ ಸಚಿವ

Iranna Anchatageri

Published

on

ಢಾಕಾ, ಡಿ 8 (ಯುಎನ್ಐ) ಬಾಂಗ್ಲಾದೇಶದ ಖ್ಯಾತ ನಟಿಗೆ ಫೋನ್ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿದ್ದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮುರಾದ್ ಹಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹಿಯಾ ಮಹಿ, ಬಾಂಗ್ಲಾದೇಶಿ ನಟಿ

ಈ ಬಾಂಗ್ಲಾದೇಶಿ ಸಚಿವ ಮುರಾದ್ ಮೇಲೆ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಕ್ಕ ಸಂಬಂಧಿಸದಂತೆ ಎರಡು ಆರೋಪಗಳನ್ನು ಹೊರಿಸಲಾಗಿತ್ತು. ಒಂದು ಪ್ರಕರಣದಲ್ಲಿ ಅವರು ನಟಿ ಮಹಿಯಾ ಮಹಿಗೆ ಫೋನ್ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿದ್ದರು. ಇದಾದ ಬಳಿಕ, ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಮೊಮ್ಮಗಳ ಬಗ್ಗೆ ಸಾರ್ವಜನಿಕವಾಗಿ ಅಸಭ್ಯ ಟೀಕೆ ಮಾಡಿದ್ದರು.

ಈಗಾಗಲೇ ಹಲವು ಪ್ರಕರಣಗಳಲ್ಲಿ ವಿವಾದಕ್ಕೀಡಾಗಿರುವ ಮುರಾದ್ ಮೇಲೆ ಪ್ರಧಾನಿ ಶೇಖ್ ಹಸೀನಾ ತೀವ್ರ ಕೋಪಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸೂಚಿಸಿದ್ದರು. ವರದಿಗಳ ಪ್ರಕಾರ, ಸಚಿವರ ಅನುಚಿತ ವರ್ತನೆಯನ್ನು ಯಾವುದೇ ಸಂದರ್ಭದಲ್ಲೂ ಸಹಿಸಲ್ಲ ಅನ್ನೋ ಮಾತನ್ನು ಶೇಖ್ ಹಸೀನಾ ಸಂಪುಟ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ನಟಿ ಹಾಗೂ ಸಚಿವ ಆಡಿಯೋ ವೈರಲ್ ಆಗಿದೆ. ‘ಢಾಕಾ ಟ್ರಿಬ್ಯೂನ್’ ಪ್ರಕಾರ , ಸಚಿವ ಮುರಾದ್ ಹಸನ್ ಈ ಹಿಂದೆ ನಟಿ ಮಹಿಯಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ಈ ವೇಳೆ ಮುರಾದ್ ಯಾವುದೋ ವಿಚಾರಕ್ಕೆ ನಟಿಯ ಮೇಲೆ ಸಿಟ್ಟಾಗಿದ್ದರು. ಸ್ವಲ್ಪ ಸಮಯದ ಬಳಿಕ ಮಹಿಯಾ ಜೊತೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಈ ಸಂಭಾಷಣೆ ವೇಳೆ, ನಟಿ ತಡೆಯಲು ಯತ್ನಿಸಿದಾಗ ಬಾಂಗ್ಲಾ ಸಚಿವ ಅತ್ಯಾಚಾರದ ಬೆದರಿಕೆ ಹಾಕಿದ್ದರು. ಅವರ ಈ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದು ನನ್ನ ಧ್ವನಿಯಲ್ಲ ಅಂತಾ ಸಚಿವ ಅಂದುಬಿಟ್ಟಿದ್ದರು. ಈ ವೇಳೆ, ಈ ಧ್ವನಿ ಸಚಿವರದ್ದೆ.. ಮುರಾದ್ ಅವರೇ ಈ ರೀತಿ ಬೆದರಿಕೆ ಹಾಕಿದ್ದು ಅಂತಾ ನಟಿ ಮಹಿಯಾ ಸ್ಪಷ್ಟಪಡಿಸಿದಾಗ ಸಚಿವ ಹಸನ್ ರಾಜೀನಾಮೆ ನೀಡಿದ್ದಾರೆ.

ಮುರಾದ್ ಹಸನ್, ಬಾಂಗ್ಲಾದೇಶದ ಸಚಿವ

ಬಾಂಗ್ಲಾದ ಜಮಾಲ್‌ಪುರದಿಂದ ಮುರಾದ್ 2008 ರಿಂದ ಸಂಸದರಾಗಿದ್ದಾರೆ. ಹಲವು ವರ್ಷಗಳಿಂದ ಶೇಖ್ ಹಸಿನಾ ಸಂಪುಟದಲ್ಲಿ ಸಚಿವ ಸ್ಥಾನ ನಿಭಾಯಿಸುತ್ತಿದ್ದಾರೆ. ಮುರಾದ್ ಈ ಮೊದಲು ದೇಶದ ಹಲವು ಸೆಲೆಬ್ರಿಟಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಇದರಿಂದ ಬಾಂಗ್ಲಾದೇಶದ ಶೇಖ್ ಹಸಿನಾ ನೇತೃತ್ವದ ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಶೇಖ್ ಹಸಿನಾ, ಸಚಿವ ಮುರಾದ್ ಹಸನ್ ಗೆ ನೇರವಾಗಿ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ.

Share