Connect with us


      
ದೇಶ

ಮಹಾತ್ಮಾ ಗಾಂಧಿಗೆ ದೇಶದ್ರೋಹಿ ಎಂದ ಧಾರ್ಮಿಕ ಮುಖಂಡ ತರುಣ್ ಮುರಾರಿ; ಪ್ರಕರಣ ದಾಖಲು

Vanitha Jain

Published

on

ನರಸಿಂಗ್‍ಪುರ: ಜನವರಿ 04 (ಯು.ಎನ್.ಐ) ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನು ದೇಶದ್ರೋಹಿ ಎಂದು ಕರೆದ ಆರೋಪದ ಮೇಲೆ ಧಾರ್ಮಿಕ ಮುಖಂಡ ತರುಣ್ ಮುರಾರಿ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ, ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ರಾಷ್ಟ್ರಪಿತನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಜನವರಿ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಇವರ ನಂತರ ಧಾರ್ಮಿಕ ಮುಖಂಡ ತರುಣ್ ಮುರಾರಿ ಗಾಂಧಿಯನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.

ಮಧ್ಯಪ್ರದೇಶದ ಛಿಂದ್‍ವಾರಾ ರಸ್ತೆಯಲ್ಲಿರುವ ವೀರ ಲಾನ್‍ನಲ್ಲಿ ನಡೆದ ಶ್ರೀಮದ್ ಭಗವತ್ ಕಥಾ ಕಾರ್ಯಕ್ರಮದಲ್ಲಿ ತರುಣ್ ಮುರಾರಿ, “ರಾಷ್ಟ್ರವನ್ನು ತುಂಡು ಮಾಡುವವರು ಹೇಗೆ ರಾಷ್ಟ್ರಪಿತರಾಗುತ್ತಾರೆ? ನಾನು ಅವರನ್ನು ವಿರೋಧಿಸುತ್ತೇನೆ. ಅವರು ದೇಶದ್ರೋಹಿ ಎಂದು ಹೇಳಿದ್ದರು.

ಈ ವಿಡಿಯೋ ವೀಕ್ಷಿಸಿದ ನರಸಿಂಗ್‍ಪುರದ ಪೊಲೀಸ್ ವರಿಷ್ಠಾಧಿಕಾರಿ ವಿಪುಲ್ ಶ್ರೀವಾಸ್ತವ ಸೆಕ್ಷನ್ 505 (2) ಮತ್ತು 153 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಸಿಆರ್‍ಪಿಸಿ ಸೆಕ್ಷನ್ 41 ಎ ಪ್ರಕಾರ ನೋಟಿಸ್ ಕಳುಹಿಸಿದ್ದಾರೆ.

ಈ ಹೇಳಿಕೆ ಮುನ್ನೆಲೆಗೆ ಬಂದ ನಂತರ ಕಾಂಗ್ರೆಸ್, ಆಕ್ಷೇಪಣೆ ದಾಖಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ನೀಡಿತು. ಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153, 504, 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share