Published
1 week agoon
ನವದೆಹಲಿ: ಮೇ 13 (ಯು.ಎನ್.ಐ.) ದೆಹಲಿಯಲ್ಲಿ ಬಿಜೆಪಿ ವರ್ಸಸ್ ಎಎಪಿ ಯುದ್ಧ ಜೋರಾಗಿದೆ. ಬಿಜೆಪಿ ಆಡಳಿತದ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಅತಿಕ್ರಮಣ ವಿರುದ್ಧದ ಕಾರ್ಯಾಚರಣೆ ನಡುವೆ ಎಎಪಿ ದೊಡ್ಡದೊಂದು ಸವಾಲು ಹಾಕಿದೆ.
ದೆಹಲಿಯ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರ ಮನೆ ಮತ್ತು ಕಚೇರಿಯನ್ನೂ ಕೂಡ ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಯೊಳಗೆ ಅಲ್ಲಿನ ಅತಿಕ್ರಮಣ ತೆರವು ಮಾಡದಿದ್ದರೆ, ಗುಪ್ತಾ ಅವರ ಮನೆಗೆ ಬುಲ್ಡೋಜರ್ಗಳೊಂದಿಗೆ ನುಗ್ಗುವುದಾಗಿ ಆಪ್ ಸವಾಲು ಹಾಕಿದೆ.
ಆಗ್ನೇಯ ದೆಹಲಿಯ ಮದನ್ಪುರ್ ಖಾದರ್ ಪ್ರದೇಶದಿಂದ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ನಿನ್ನೆ ಬಂಧಿಸಿದ ನಂತರ ಆಪ್ ಈ ಮಾತಿನ ಯುದ್ಧಕ್ಕಿಳಿದಿದೆ.
“ಆದೇಶ ಗುಪ್ತಾ ಅವರು ತಮ್ಮ ಮನೆ ಮತ್ತು ಕಚೇರಿಗಾಗಿ ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿದ್ದಾರೆ. ನಾವು ದೂರುಗಳನ್ನು ಸಲ್ಲಿಸಿದ್ದೇವೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಎಎಪಿ ಆರೋಪಿಸಿದೆ.
ಇಂದು ಬೆಳಗ್ಗೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬುಲ್ಡೋಜರ್ಗಳ ಬೆದರಿಕೆಯ ಮೂಲಕ “ಹಣ ಸುಲಿಗೆ ಮಾಡುವ ಬಿಜೆಪಿಯ ದೊಡ್ಡ ಯೋಜನೆ” ಎಂದಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ 63 ಲಕ್ಷ ಮನೆಗಳನ್ನು ಕೆಡವಲು ಬಿಜೆಪಿ ಯೋಜಿಸಿದೆ ಎಂದು ಅವರು ಹೇಳಿದರು.
ಬುಲ್ಡೋಜರ್ಗಳಿಂದ ಬೆದರಿಸಿ ಬಿಜೆಪಿ ಜನರಿಂದ 5-10 ಲಕ್ಷ ರೂ. ವಸೂಲಿ ಮಾಡುತ್ತಿದೆ ಎಂದು ಎಎಪಿ ದೆಹಲಿಯ ಪೌರ ಸಂಸ್ಥೆಗಳ ಉಸ್ತುವಾರಿ ದುರ್ಗೇಶ್ ಪಾಠಕ್ ಆರೋಪಿಸಿದ್ದಾರೆ. ಈ ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಿದ ಯಾವೊಬ್ಬ ನಗರಸಭೆ ಅಧಿಕಾರಿಯ ಮನೆ ಮೇಲೂ ಸಹ ಇದುವರೆಗೆ ಒಂದು ಬುಲ್ಡೋಜರ್ ಹತ್ತಿಸಿಲ್ಲ ಎಂದು ಅವರು ಆರೋಪಿಸಿದರು.
ಕೊನೆಗೂ ಸಿಕ್ತು ಜಾಮೀನು.. 2 ವರ್ಷದ ಬಳಿಕ ಜೈಲಿಂದ ಹೊರಬಂದ ಅಜಂಖಾನ್
ಸುನೀಲ್ ಜಖರ್ ಬಿಜೆಪಿಗೆ ಸೇರ್ಪಡೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸಾಮೂಹಿಕ ನಾಯಕತ್ವ ಇಲ್ಲದೇ ಕಾಂಗ್ರೆಸ್ ಗೆಲ್ಲುವುದು ಸಾಧ್ಯವೇ ?
ಶರದ್ ಪವಾರ್ ವಿರುದ್ಧ ಪೋಸ್ಟ್; ಸಿನಿಮಾ ನಟಿಗೆ ನ್ಯಾಯಾಂಗ ಬಂಧನ
ಒಂದೇ ದಿನ ಕಾಂಗ್ರೆಸ್ ಗೆ ಡಬಲ್ ಶಾಕ್! ಶಾಸಕ ಸ್ಥಾನಕ್ಕೆ ರಾಜಸ್ತಾನ ಸಿಎಂ ಆಪ್ತ ರಾಜೀನಾಮೆ
ರಾಜೀವ್ ಗಾಂಧಿ ಹತ್ಯೆ ಕೇಸ್ ಅಪರಾಧಿಯ ಬಿಡುಗಡೆ ‘ನೋವು ಮತ್ತು ನಿರಾಶದಾಯಕ’: ಕಾಂಗ್ರೆಸ್