Connect with us


      
ಕರ್ನಾಟಕ

ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ “ಹೊನ್ನಾಳಿ ಹೋರಿ”

Iranna Anchatageri

Published

on

ದಾವಣಗೆರೆ: ಏಪ್ರಿಲ್ 02 (ಯು.ಎನ್.ಐ.) ಸದಾ ಸುದ್ದಿಯಲ್ಲಿರೋವ ಹೊನ್ನಾಳಿ ಹೋರಿ ರೇಣಕುಚಾರ್ಯ ಇಂದು ಟ್ರ್ಯಾಕ್ಟರ್ ಏರಿ ಹೊಲದಲ್ಲಿ ಉಳುಮೆ ಮಾಡಿದ್ದಾರೆ. ಯುಗಾದಿ ಹಬ್ಬದ ಅಂಗವಾಗಿ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆಗೆ ಆಗಮಿಸಿದ ಅವರು ಮಂಜುನಾಥ ಸ್ವಾಮಿ, ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಾಜ್ಯದ ಜನತೆಗೆ ಹಾಗೂ ಸುಂಕದಕಟ್ಟೆ ಗ್ರಾಮಸ್ಥರಿಗೆ ಯುಗಾದಿ‌ ಹಬ್ಬದ ಶುಭಾಶಯವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣಕುಚಾರ್ಯ ಕೋರಿದರು. ಯುಗಾದಿ ಹಬ್ಬ ಎಲ್ಲರ ಬಾಳಲ್ಲಿ ಬೆಳಕು ನೀಡಲಿ. ಬೇವು ಬೆಲ್ಲಾ ತಿಂದ ಎಲ್ಲರ ಬಾಳಲ್ಲೂ ಕಹಿ ದೂರವಾಗಲಿ ಎಂದು ಶಾಸಕ ರೇಣುಕಾಚಾರ್ಯ ಆಶೀಸಿದರು.

ಇದೇ ವೇಳೆ ಅಲ್ಲೇ ಪಕ್ಕದಲ್ಲಿದ್ದ ರೈತರೊಬ್ಬರ ಟ್ರ್ಯಾಕ್ಟರ್ ಏರಿದ ರೇಣಕುಚಾರ್ಯ, ನೆಟ್ಟಗೆ ಹೊಲದತ್ತ ಧಾವಿಸಿ ಉಳುಮೆ ಮಾಡಿದರು. ಈ ವೇಳೆ ರೈತರು, ಗ್ರಾಮಸ್ಥರು ಹಾಗೂ ಅಭಿಮಾನಿಗಳು ಶಾಸಕರ ಟ್ರ್ಯಾಕ್ಟರ್ ಚಾಲನೆ ಮಾಡುವುದನ್ನು ನೋಡಿ ಬೆರಗಾದರು..

Continue Reading
Share