Published
6 months agoon
By
UNI Kannadaಚಿಕ್ಕಬಳ್ಳಾಪುರ, ನ 7 (ಯುಎನ್ಐ) ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಸತಿ ರಹಿತ ಕುಟುಂಬಗಳಿಗೆ ಒಂದು ವರ್ಷದೊಳಗೆ 38 ಸಾವಿರ ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಪುರ ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ, ಗ್ರಾಮಗಳ ಕಡೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಡವರು ಸ್ವಾಭಿಮಾನದಿಂದ ತಮ್ಮದೇ ಆದ ಸೂರು ನಿರ್ಮಿಸಿಕೊಳ್ಳಲು ಜಿಲ್ಲಾಡಳಿತ 834 ಎಕರೆ ಜಮೀನನ್ನು ಗುರುತಿಸಿ ನಿವೇಶನಗಳನ್ನಾಗಿ ಹಂಚಲು ಮೀಸಲಿಡಲಾಗಿದೆ ಎಂದರು.
ನಿವೇಶನ ಹಂಚಿಕೆ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು ಮುಂದಿನ ಒಂದು ವರ್ಷದೊಳಗಾಗಿ 38 ಸಾವಿರ ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಗ್ರಾಮಪಂಚಾಯಿತಗಳನ್ನಾಗಿ ಆಯ್ಕೆ ಮಾಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪುರ ಗ್ರಾಮ ಪಂಚಾಯಿತಿ ಸಹಿತ 18 ಗ್ರಾಮ ಪಂಚಾಯಿತಿಗಳನ್ನು ಇದರಡಿ ಗುರುತಿಸಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮನೆ ಬಾಗಿಲಿಗೇ ತಲುಪಿಸುವ ಸದುದ್ದೇಶದಿಂದ “ಜಿಲ್ಲಾಧಿಕಾರಿಗಳ ನಡೆ- ಗ್ರಾಮಗಳ ಕಡೆ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ||ಕೆ.ಸುಧಾಕರ್ ಹೇಳಿದರು. ಇದೇ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ, ಆಯುಷ್ಮಾನ್ ಭಾರತ್ ಕರ್ನಾಟಕ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಮೂರು ಸಾವಿರ ಫಲಾನುಭವಿಗಳಿಗೆ ಸಚಿವರು ಸೌಲಭ್ಯ ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕರ್ನಾಟಕ ಮಕ್ಕಳ ಬೆಳವಣಿಗೆ ಬಗ್ಗೆ ಡಿಕೆಶಿ ಕಳವಳ
ರಾಜ್ಯಸಭಾ ಚುನಾವಣೆ: ಹೊರ ರಾಜ್ಯದವರ ಆಯ್ಕೆ ಬೇಡ – ವಾಟಾಳ್
ಬಿಬಿಎಂಪಿ ಚುನಾವಣೆಗೆ ಸರ್ಕಾರ, ಪಕ್ಷ ಸಿದ್ಧ: ಆರ್ ಅಶೋಕ
ಬೃಹತ್ ಪಾಲಿಕೆ ಚುನಾವಣೆ: ಡಿಲಿಮಿಟೇಷನ್ ಬಹುತೇಕ ಪೂರ್ಣ
ಪಠ್ಯಪುಸ್ತಕದಲ್ಲಿ ಬರೇ ಚಾಚಾ ನೆಹರೂ, ಉಕ್ಕಿನ ಮಹಿಳೆ, ನಕಲಿ ಗಾಂಧಿ ಪರಿವಾರದ ಶಿಕ್ಷಣ ಬೋಧಿಸಬೇಕೇ: ಬಿಜೆಪಿ ಕಿಡಿ
8 ದಿನಗಳಲ್ಲಿ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ – ಮುಖ್ಯಮಂತ್ರಿ ಬೊಮ್ಮಾಯಿ