Connect with us


      




ಕರ್ನಾಟಕ

ಕುದುರೆ ಮುಖ ಅಭಿವೃದ್ಧಿಗೆ ಆರ್ & ಆರ್ ಯೋಜನೆ ಸಿದ್ದತೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಜವಬ್ದಾರಿ :  ಸಚಿವ ಹಾಲಪ್ಪ ಆಚಾರ್

UNI Kannada

Published

on

ಬೆಂಗಳೂರು : ಮಾರ್ಚ್ 14 (ಯು.ಎನ್.ಐ.) ಸ್ಥಗಿತಗೊಂಡಿರುವ  ಕುದುರೆಮುಖ  ಅದಿರು ಕಾರ್ಖಾನೆಯ ನಂತರ ಅಲ್ಲಿನ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಗಾಗಿ ಸುಪ್ರೀಂಕೋರ್ಟ್ ತೀರ್ಪಿನಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಗೆ ಆರ್ ಅಂಡ್ ಆರ್ ಯೋಜನೆ ಸಿದ್ಧಪಡಿಸಲು ವಹಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪಾಚಾರ್ ವಿಧಾನ ಸಭೆಯಲ್ಲಿಂದು ತಿಳಿಸಿದರು.

ವಿಧಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮೂಡಿಗೆರೆ ಶಾಸಕ ಎಂ. ಪಿ. ಕುಮಾರ ಸ್ವಾಮಿ, ಕುದುರೆಮುಖ ಆದಿರು ಕಾರ್ಖಾನೆ ಸ್ಥಗಿತಗೊಂಡ ನಂತರ ಅಲ್ಲಿನ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು, ಪ್ರವಾಸಿ ಕೇಂದ್ರ ಸ್ಥಾಪನೆ ಅಥವಾ ಯಾವುದಾದರೂ ಯೋಜನೆ ಅನುಷ್ಠಾನ ಗೊಳಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರ ಗಮನ ಸಳೆದರು.

ಇದಕ್ಕೆ ಉತ್ತರಿಸಿದ ಸಚಿವರು, ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಕುದುರೆ ಮುಖ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳನ್ನು ಅರಣ್ಯ ಇಲಾಖೆಗೆ ವರ್ಗಾಯಿಸುವಂತೆ ಉಸ್ತುವಾರಿ ಸಮಿತಿಗೆ ವಹಿಸಿದೆ. ಆರ್ ಅಂಡ್ ಆರ್ ಯೋಜನೆ ಅನುಷ್ಠಾನಕ್ಕೆ ಕುದುರೆಮುಖ ಸಂಸ್ಥೆಗೆ ಅಗತ್ಯ ಹಣಕಾಸು ನೆರವನ್ನು ಒದಗಿಸುವಂತೆ ತೀರ್ಪು ನಲ್ಲಿ ತಿಳಿಸಲಾಗಿದ್ದು, ಕುದುರೆಮುಖ ಸಂಸ್ಥೆಯು 25ಕೋಟಿ ರೂಪಾಯಿ ಪರಿಹಾರ ಮೊತ್ತ ಮತ್ತು ವಾರ್ಷಿಕ 5ಕೋಟಿ ರೂಪಾಯಿಗಳನ್ನು ಸಂರಕ್ಷಣೆ, ಸಂಶೋಧನೆಗಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಖಾತೆಯಲ್ಲಿ ಜಮಾ ಮಾಡುವಂತೆ ಆದೇಶದಲ್ಲಿ ಉಲೇಖಿಸಿದೆ ಎಂದು ಹೇಳಿದರು.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರತಿನಿಧಿ, ರಾಜ್ಯ ಸರ್ಕಾರದ ಪ್ರತಿನಿಧಿ ಮತ್ತು ರಾಜ್ಯದ ಎನ್ ಜಿ ಒ ನಿಂದ ಒಬ್ಬ  ಪರಿಣಿತ  ಪ್ರತಿನಿಧಿಯನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಿ ಆರ್ ಅಂಡ್ ಆರ್ ಅನುಷ್ಠಾನ ಗೊಳಿಸ ಬೇಕು. ಕುದುರೆಮುಖ  ಸಂಸ್ಥೆಯು ಮೂಲ ಸೌಲಭ್ಯಗಳನ್ನು ಮೂಲಬೆಲೆಗೆ ರಾಜ್ಯದ ಅರಣ್ಯ ಇಲಾಖೆಗೆ ವರ್ಗಾಯಿಸುವಂತೆ ತೀರ್ಪಿನಲ್ಲಿ ತಿಳಿಸಿದೆ ಎಂದು ವಿವರಿಸಿದರು.

ಸುಪ್ರೀಂಕೋರ್ಟ್ ನ ಆದೇಶದ ನಡಾವಳಿ ಹಿನ್ನಲೆಯಲ್ಲಿ ಕುದುರೆ ಮುಖ ಸಂಸ್ಥೆ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕುದುರೆಮುಖ ಸಂಸ್ಥೆಯು ಹೊಂದಿದ ಕಟ್ಟಡ ಹಾಗೂ ಮೂಲ ಸೌಕರ್ಯ ಗಳ ಬಗ್ಗೆ ತೀರ್ಮಾನಿಸ ಬೇಕಿದೆ ಎಂದು ಹೇಳಿದರು.

Share