Connect with us


      
ಕರ್ನಾಟಕ

ನನಗೆ ಯಾವುದೇ ರಾಹುಕಾಲ ಗುಳಿಕಾಲವಿಲ್ಲ: ರೇವಣ್ಣ

Iranna Anchatageri

Published

on

ವಿಧಾನಸಭೆ/ಬೆಂಗಳೂರು: ನನಗೆ ಯಾವುದೇ ರಾಹುಕಾಲ ಗುಳಿಕಾಲವಿಲ್ಲ. ನಾನು ಯಾವ ಸಮಯದಲ್ಲಿ ಮಾತನಾಡಿದರೂ ಒಳ್ಳೆಯದೇ ಆಗುತ್ತದೆ ಎಂದು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಇಂದು ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾದ ತಕ್ಷಣ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಮೀಸಲಿಟ್ಟ ವಿಚಾರದಲ್ಲಿ ಎಚ್.ಡಿ. ರೇವಣ್ಣ ಕಾಂಗ್ರೆೆಸ್‌ನವರು ಅಷ್ಟು ವರ್ಷ ಅಧಿಕಾರದಲ್ಲಿ ಏನು ಮಾಡಿದ್ದಾರೆ ಎಂದು ಹೇಳಲಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ದೇವೇಗೌಡರ ಕೊಡುಗೆ ಏನು ಎಂದು ಕೇಳಿ ನೋಡಿ ಎಂದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ದೇವೇಗೌಡರು ಪ್ರಧಾನಿಯಾಗಿ ಕೇಂದ್ರ ಸರ್ಕಾರದಿಂದ 800 ಕೋಟಿ ರೂ. ನೀಡದೇ ಹೋಗಿದ್ದರೆ, 12 ಲಕ್ಷ ಎಕರೆ ನೀರಾವರಿಯಾಗುತ್ತಿರಲಿಲ್ಲ. ಕಾಂಗ್ರೆಸ್‌ನವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾವುದೇ ಕೊಡುಗೆ ನೀಡಿಲ್ಲ. ಬರೀ ರಾಜಕಾರಣ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.

ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಉಪ ನಾಯಕ ಯು.ಟಿ ಖಾದರ್, ಬರೀ ಕಾಂಗ್ರೆಸ್‌ನ್ನು ದೂರುವ ಬದಲು ನೀವು ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ ಎನ್ನುವುದನ್ನು ಹೇಳಿ ಎಂದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಎಚ್.ಡಿ. ರೇವಣ್ಣ ಅವರು, ರಾಹುಕಾಲ, ಗುಳಿ ಕಾಲ ನೋಡಿಕೊಂಡು ಸದನಕ್ಕೆೆ ಬಂದಿದ್ದಾರೆ. ಅವರಿಗೆ ಈಗಲೇ ಮಾತನಾಡಲು ಕೊಟ್ಟು ಬಿಡಿ ಎಂದು ರೇವಣ್ಣ ಅವರ ಕಾಲೆಳೆದರು.

ಅವರ ಮಾತಿಗೆ ಪ್ರತಿಕ್ರಿಯಿಸಿದ ರೇವಣ್ಣ, ನನಗೆ ಯಾವುದೇ ರಾಹುಕಾಲ, ಗುಳಿಕಾಲ ಇಲ್ಲ. ನಾನು ಯಾವ್ ಕಾಲದಲ್ಲಿ ಮಾತನಾಡಿದರೂ ತೊಂದರೆಯಾಗುವುದಿಲ್ಲ. ಆ ಶಕ್ತಿ ಇದೆ ನನಗೆ ಎಂದು ಹೇಳಿದರು.

Share