Connect with us


      
ಕರ್ನಾಟಕ

ಕಂದಾಯ ಇಲಾಖೆಯಿಂದ ಬಂಪರ್ ಕೊಡುಗೆ ಘೋಷಣೆ

Kumara Raitha

Published

on

ಬೆಂಗಳೂರು: ಜನೆವರಿ 01 (ಯು.ಎನ್.ಐ.) ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನತೆಗೆ ಹೊಸ ವರ್ಷದ ಅಂಗವಾಗಿ ಕಂದಾಯ ಇಲಾಖೆ ಬಂಪರ್ ಕೊಡುಗೆ ಘೋಷಿಸಿದೆ.

ಆಸದತಿ ವಹಿವಾಟಿಗೆ ಸಂಬಂಧಿಸಿದಂತೆ ನಿವೇಶನ, ಅಪಾರ್ಟ್ ಮೆಂಟ್ ಗಳಲ್ಲಿ ಫ್ಲಾಟ್ ಖರೀದಿ ಮಾಡಿದಾಗ ಸೂಚಿತ ಮೌಲ್ಯಕ್ಕಿಂತ ಶೇಕಡ 10ರಷ್ಟು ಶುಲ್ಕು ಕಡಿಮೆ ತೆಗೆದುಕೊಳ್ಳಲು ಕಂದಾಯ ಇಲಾಖೆ ನಿರ್ಧರಿಸಿದೆ. ಈ ಕೊಡುಗೆ ಮಾರ್ಚ್ ತಿಂಗಳ ಅಂತ್ಯದವರೆಗೂ ಇರಲಿದೆ. ಈಗಾಗಲೇ ಒಪ್ಪಂದಗಳಾಗಿರುವ, ನೋಂದಣಿ ಮಾಡಿಸಲು ಅನುವಾಗಿರುವ ಖರೀದಿದಾರರಿಗೆ ಈ ಕೊಡುಗೆ ಅನ್ವಯವಾಗಲಿದೆ. ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂದಾಯ ಸಚಿವ ಆರ್ . ಅಶೋಕ್ ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿವ ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ,ಕೆ, ಶಿವಕುಮಾರ್ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರು ವರ್ಷ ಇತ್ತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ರು. ನಯಾ ಪೈಸಾ ನೀರಾವರಿಗೆ ಮೀಸಲಿಡಲಿಲ್ಲ. ಅದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಏನೂ ಮಾಡದಿದ್ದಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಗಿಮಿಕ್ ಪಾದಯಾತ್ರೆ” ಎಂದು ವ್ಯಂಗ್ಯವಾಡಿದ್ದಾರೆ.

ಜನರ ಬಗ್ಗೆ ಅವರಿಗೆ ಕಿಂಚಿತ್ ಕಾಳಜಿ ಇಲ್ಲ ಮೇಕೇದಾಟು ಬಗ್ಗೆ ಈಗ ಮೈ ಪರಚಿಕೊಳ್ತಿದ್ದಾರೆ. ನನಗೆ ಮಸಾಲೆ ಬೇಕಿಲ್ಲ, ಅವರಿಗೆ ಬೇಕಿರೋದು. ಇವರಿಗೆ ನಿಜವಾಗಿ ಕಾಳಜಿ ಇದ್ರೆ, ಅಧಿಕಾರದಲ್ಲಿ ಇದ್ದಾಗಲೇ ಮಾಡ್ತಿದ್ರು. ಡಿಪಿಆರ್  ಮಾಡಲು ಆರು ವರ್ಷ ಬೇಕಿತ್ತಾ.? ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಮಾಡಿದ್ರು, ಅಲ್ಲಿ ನೀರೇ ಬತ್ತಿ ಹೋಯ್ತು. ಈಗ ಮೇಕೇದಾಟು ಕೂಡ ಅದೇ ಪರಿಸ್ಥಿತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share