Connect with us


      
ಸಾಮಾನ್ಯ

ಶೇನ್ ವಾರ್ನ್ ನೆನೆದು ಕಣ್ಣೀರಿಟ್ಟ ಮಾಜಿ ನಾಯಕ ರಿಕಿ ಪಾಂಟಿಂಗ್  

UNI Kannada

Published

on

ಆಸ್ಟ್ರೇಲಿಯ : ಮಾರ್ಚ್ 06 (ಯು.ಎನ್.ಐ.) ಎಲ್ಲರಂತೆಯೇ ನಾನು ಕೂಡ ತೀವ್ರ ದಿಗ್ಭ್ರಾಂತಿಗೆ ಗುರಿಯಾಗಿದ್ದೇನೆ. ಬೆಳಗ್ಗೆ ನಿದ್ದೆಯಿಂದೇಳುತ್ತಿದ್ದಂತೆ ಮೆಸೇಜ್‌ಗಳು ಬರತೊಡಗಿದವು. ನನ್ನ ಮಗಳನ್ನು ಬೆಳಗ್ಗೆ ನೆಟ್‌ಬಾಲ್‌ ಆಟಕ್ಕೆ ಕರೆದುಕೊಂಡು ಹೋಗುವ ಪ್ಲಾನ್‌ನೊಂದಿಗೆ ಕಳೆದ ರಾತ್ರಿ ಮಲಗಿದ್ದೆ. ಆದರೆ ಅಷ್ಟರಲ್ಲೇ ಹೀಗೆಲ್ಲ ನಡೆದಿದೆ. ಈ ಘಟನೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆತನೊಂದಿಗೆ ಕಳೆದ ನೆನಪುಗಳು ತುಂಬಾ ಇವೆ. ನನ್ನ ಜೀವನದಲ್ಲಿ ವಾರ್ನ್ ಒಂದು ಭಾಗವಾಗಿದ್ದ’’ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ತೀವ್ರ ಭಾವೋದ್ವೇಗಕ್ಕೆ ಒಳಗಾಗಿ ಸಹಚರ ಆಟಗಾರ ಶೇನ್‌ ವಾರ್ನ್‌ನನ್ನು ನೆನೆದೆ ಕಣ್ಣೀರಿಟ್ಟರು.

ಆಸೀಸ್ ಕ್ರಿಕೆಟ್ ದಿಗ್ಗಜ ಮತ್ತು ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನರಾಗಿದ್ದಾರೆ. ಥೈಲ್ಯಾಂಡ್‌ನ ವಿಲ್ಲಾದಲ್ಲಿ ಪ್ರಾಣಬಿಟ್ಟಿದ್ದಾರೆ. ಈ ದುರಂತದಿಂದ ಕ್ರೀಡಾ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ವಾರ್ನ್ ಅವರ ನಿಧನಕ್ಕೆ ಸಹ ಆಟಗಾರರು ಮತ್ತು ಅಭಿಮಾನಿಗಳು ಅವರ ನೆನೆದು ಉದ್ವೇಗಕ್ಕೊಳಗಾಗುತ್ತಿದ್ದಾರೆ. ಸ್ಪಿನ್ ಮಾಂತ್ರಿಕ ತನ್ನ ಮಣಿಕಟ್ಟಿನಿಂದ ಮ್ಯಾಜಿಕ್ ಮಾಡುತ್ತಿದ್ದುದನ್ನು ನೆನಪಿಸಿಕೊಂಡಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿ ಬರುತ್ತಿದೆ ಎಂದು ರಿಕಿ ಪಾಂಟಿಂಗ್ ದುಖಃ ತಡೆಯಲಾಗದೆ ಅತ್ತಿದ್ದಾರೆ.

ವಾರ್ನ್ 15 ವರ್ಷದವನಾಗಿದ್ದಾಗ ಕ್ರಿಕೆಟ್ ಅಕಾಡೆಮಿಯಲ್ಲಿ ಭೇಟಿಯಾದ 47 ವರ್ಷದ ಪಾಂಟಿಂಗ್, ವಾರ್ನ್ ತನಗೆ ಅಡ್ಡಹೆಸರು ಇಟ್ಟಿದ್ದನ್ನು ನೆನಪಿಸಿಕೊಂಡರು. ತಮ್ಮ ವೃತ್ತಿ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದ ಅವರೊಂದಿಗಿನ ಆತ್ಮೀಯತೆಯನ್ನು ಸ್ಮರಿಸಿ, ಒಂದು ದಶಕದಿಂದ ಒಟ್ಟಿಗೆ ಕ್ರಿಕೆಟ್ ಆಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಿಕಿ ಪಾಂಟಿಂಗ್ ನೇತೃತ್ವದಲ್ಲಿ ವಾರ್ನ್ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದನ್ನ ನೆನೆಸಿಕೊಂಡಿದ್ದಾರೆ.

 

Share