Connect with us


      
ದೇಶ

ಸೇನಾ ನೆಹ್ವಾಲ್ ಬೆಂಬಲಕ್ಕೆ ನಿಂತ ಸಚಿವ ಕಿರಣ್ ರಿಜಿಜು

Vanitha Jain

Published

on

ನವದೆಹಲಿ: ಜನೆವರಿ 11 (ಯು.ಎನ್.ಐ.) ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ಧಾರ್ಥ್ ಮಾಡಿರುವ ಹೇಳಿಕೆಯನ್ನು ಕಾನೂನು ಸಚಿವ ಕಿರಣ್ ರಿಜಿಜು ಖಂಡಿಸಿದ್ದು, ಸಿದ್ಧಾರ್ಥ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಂತಹ ಕಾಮೆಂಟ್‍ಗಳು ವ್ಯಕ್ತಿಯ “ಅಜ್ಞಾನದ ಮನಸ್ಥಿತಿ”ಯನ್ನು ತೋರಿಸುತ್ತದೆ ಎಂದು ನಟ ಸಿದ್ಧಾರ್ಥ್ ವಿರುದ್ಧ ಕಿಡಿಕಾರಿದ್ದಾರೆ.

ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡುವಲ್ಲಿ ಅವರು ಅತ್ಯುತ್ತಮ ಕೊಡುಗೆ ನೀಡುವ ಮೂಲಕ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದ ರಿಜಿಜು, ಆಕೆ ಒಲಂಪಿಕ್ ಪದಕ ವಿಜೇತೆ ಅಲ್ಲದೆ ದೇಶಭಕ್ತೆ. ಅಂತಹ ಐಕಾನ್ ವ್ಯಕ್ತಿತ್ವದ ಮೇಲೆ ಇಲ್ಲಸಲ್ಲದ ಕಮೆಂಟ್ ಮಾಡುವುದು ವ್ಯಕ್ತಿಯ ಅವಿವೇಕದ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಪಂಜಾಬ್‍ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯಿಸಿದ ಸೈನಾ, “ಯಾವುದೇ ರಾಷ್ಟ್ರವು ತನ್ನ ದೇಶದ ಪ್ರಧಾನಿಯ ಭದ್ರತೆಗೆ ಧಕ್ಕೆಯಾದರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಅರಾಜಕತಾವಾದಿಗಳಿಂದ ಪ್ರಧಾನಿ ಮೋದಿಯವರ ಮೇಲೆ ನಡೆದಿರುವ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ಧಾರ್ಥ್, “ವಿಶ್ವದ ಕಾಕ್ ಚಾಂಪಿಯನ್ ದೇವರಿಗೆ ಧನ್ಯವಾದಗಳು, ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ ಎಂದು ಟ್ವೀಟ್ ಮಾಡಿದ್ದರು.

Share