Published
6 months agoon
By
Vanitha Jainನವದೆಹಲಿ, ಜನವರಿ 01 (ಯು.ಎನ್.ಐ) ಮುಂಬೈ ಮತ್ತು ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ನಿರಂತರವಾಗಿ ಏರುತ್ತಲೇ ಇದೆ. ಶನಿವಾರ ಮುಂಬೈ, ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಮುಂಬೈನಲ್ಲಿ ಶನಿವಾರ 6,347 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಒಂದು ಸಾವು ಸಂಭವಿಸಿದೆ ಮತ್ತು 451 ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಶುಕ್ರವಾರ 5,631 ಸೋಂಕುಗಳು ದಾಖಲಾಗಿದ್ದವು. ಮುಂಬೈನಲ್ಲಿ ಈಗ 22,334 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಇಲ್ಲಿಯವರೆಗೆ 7,50,158 ಚೇತರಿಕೆ ದಾಖಲಾಗಿದೆ.
ಇನ್ನು ದೆಹಲಿಯಲ್ಲಿ 2,716 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರದ ಸಂಖ್ಯೆಗಿಂತ 51% ಹೆಚ್ಚಾಗಿದೆ – ಮತ್ತು ಪಾಸಿಟಿವಿಟಿ ದರವು ಶೇಕಡಾ 3.64ಕ್ಕೆ ಏರಿದೆ.
ಶನಿವಾರ ದೆಹಲಿಯಲ್ಲಿ 31 ಹೊಸ ಒಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಮೈಕ್ರಾನ್ ಸಂಖ್ಯೆ 351ಕ್ಕೆ ಏರಿದೆ, ದೇಶದಲ್ಲಿ ಮಹಾರಾಷ್ಟ್ರದ ನಂತರ ದೆಹಲಿ ಎರಡನೇ ಅತಿ ಹೆಚ್ಚು ಒಮೈಕ್ರಾನ್ ಪ್ರಕರಣಗಳನ್ನು ಹೊಂದಿದೆ.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಬಂಧನ; ಜರ್ಮನಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ
ಚೀನಾದ ಕಂಪನಿಗಳು ಭಾರತದ ಕಾನೂನು ಪಾಲಿಸಬೇಕು: ವಿದೇಶಾಂಗ ಸಚಿವಾಲಯ
ಶೀಘ್ರದಲ್ಲೇ ವಾಣಿಜ್ಯ ಹಾರಾಟ ನಡೆಸಲಿದೆ ‘ಆಕಾಶ ಏರ್’
ಫೋನ್ ಹಿಂತಿರುಗಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತನ ಕೊಂದ ಪಾಪಿ
ಹಿಂದೂ ವ್ಯಕ್ತಿಯ ಅಂತಿಮ ವಿಧಿವಿಧಾನ ನೆರವೇರಿಸಿದ ಮುಸ್ಲಿಂ ಕುಟುಂಬ
ವಿವಾಹ ಜೀವನಕ್ಕೆ ಕಾಲಿರಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್