Connect with us


      
ಕ್ರೀಡೆ

ಟ್ರೋಲ್ ಮಾಡವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ – ರೋಹಿತ್ ಶರ್ಮಾ ಮೊದಲ ಸಂದರ್ಶನ

Iranna Anchatageri

Published

on

ಮುಂಬೈ, ಡಿಸೆಂಬರ್ 12 (ಯು.ಎನ್.ಐ) ನಾಯಕನಾದ ನಂತರ ರೋಹಿತ್ ಶರ್ಮಾ ಮೊದಲ ಸಂದರ್ಶನ ನೀಡಿದ್ದಾರೆ. ಬಿಸಿಸಿಐ ಟಿವಿಗೆ ಮಾತನಾಡಿದ ಅವರು, “ನೀವು ದೇಶಕ್ಕಾಗಿ ಆಡುವಾಗ, ನಿಮ್ಮ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ನಿಮ್ಮ ಬಗ್ಗೆ ಜನ ಏನಾದ್ರೂ ಹೇಳುತ್ತಲೇ ಇರುತ್ತಾರೆ. ಕೆಲವರು ಸರಿ ಹೇಳಿದ್ರೆ.. ಇನ್ನು ಕೆಲವರು ನಿಮ್ಮ ನಿರ್ಧಾರ ತಪ್ಪು ಅಂತಾ ಹೇಳುತ್ತಾರೆ. ಆದರೆ ನಾನು ನಾಯಕನಾಗಿ ಅಷ್ಟೇ ಅಲ್ಲ.. ಕ್ರಿಕೆಟಿಗನಾಗಿ ನನ್ನ ಕೆಲಸದ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಜನರು ಏನು ಹೇಳುತ್ತಾರೆಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಏಕೆಂದರೆ ಮಾತಾಡುವವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ.

ರೋಹಿತ್‌ರನ್ನು ಏಕದಿನ ತಂಡದ ಕ್ಯಾಪ್ಟನ್ ಮಾಡಿದ ಬಳಿಕ ಸೌರವ್ ಗಂಗೂಲಿ ಹಾಗೂ ಬಿಸಿಸಿಐ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ನಡುವಿನ ಸಂಬಂಧ ಚೆನ್ನಾಗಿಲ್ಲ ಅಂತಾ ಕಮೆಂಟ್ ಮಾಡಲಾಗುತ್ತಿದೆ. ಆದರೆ ಏಕದಿನ ನಾಯಕನ ಘೋಷಣೆಗೂ ಪೂರ್ವದಲ್ಲಿ ರೋಹಿತ್ ಶರ್ಮಾ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿಯನ್ನು ಹೊಗಳಿದ್ದರು. ಅಲ್ಲದೆ, ಕೊಹ್ಲಿ ತಮ್ಮ ನಾಯಕ ಅಂತಾ ಹೇಳಿಕೆ ನೀಡಿದ್ದರು.

ಇನ್ನು ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಲಯ ಕಂಡುಕೊಂಡಿರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, “ನಾವು ದೊಡ್ಡ ಟೂರ್ನಿಗಳನ್ನು ಆಡಿದಾಗ ಎಲ್ಲ ರೀತಿಯ ವಿಷಯಗಳು ನಡೆಯುತ್ತವೆ ಎಂಬುದು ಪ್ರತಿಯೊಬ್ಬ ಆಟಗಾರನಿಗೂ ಗೊತ್ತು. ಆದರೆ, ನಾವು ನಮ್ಮ ಕೆಲಸ ಮತ್ತು ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುವತ್ತ ಮಾತ್ರ ಗಮನ ಹರಿಸುವುದು ಮುಖ್ಯ. ಹೊರಗಡೆ ಏನಾದ್ರೂ ಪರವಾಗಿಲ್ಲ.. ನಿಮ್ಮ ಆಟಕ್ಕೆ ನಿಮಗೆ ತಿಳಿದಿರುವ ರೀತಿಯಲ್ಲಿ ಆಟವಾಡಿ” ಅಂತಾ ಆಟಗಾರರಿಗೆ ತಿಳಿಸಿದ್ದಾರೆ.

ರಾಹುಲ್ ದ್ರಾವಿಡ್ ಕೈಜೋಡಿಸಲಿದ್ದಾರೆ

“ನಾವು ಪರಸ್ಪರರ ಬಗ್ಗೆ ಏನು ಯೋಚಿಸುತ್ತೇವೆ ಅನ್ನೋದು ಮುಖ್ಯವಾಗಿರುತ್ತದೆ. ಆಟಗಾರರ ಮಧ್ಯೆ ಬಲವಾದ ಬಾಂಧವ್ಯ ಕಟ್ಟುವುದು ಮುಖ್ಯವಾಗಿರುತ್ತದೆ. ಜನರ ಬಗ್ಗೆ ಯೋಚಿಸುವುದನ್ನು ಬಿಟ್ಟರೆ ಮಾತ್ರ ನಾವು ಇದನ್ನು ಮಾಡಲು ಸಾಧ್ಯ. ಈ ವಿಚಾರದಲ್ಲಿ ರಾಹುಲ್ ದ್ರಾವಿಡ್ ಭಾಯ್ ಕೂಡ ನಮಗೆ ಕೈಗೂಡಿಸಲಿದ್ದಾರೆ” ಅಂತಾ ರೋಹಿತ್ ತಿಳಿಸಿದರು.

ಇನ್ನು ಡಿಸೆಂಬರ್ 16ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡದ ಆಟಗಾರರು ಮುಂಬೈನಲ್ಲಿ ಜಮಾಯಿಸಿದ್ದಾರೆ. ಆದರೆ, ಏಕದಿನ ಪಂದ್ಯಕ್ಕೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಡಿಸೆಂಬರ್ 26 ರಂದು ಸೂಪರ್ ಸ್ಪೋರ್ಟ್ಸ್ ಪಾರ್ಕ್ ಸೆಂಚೂರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಆಡಲಿದೆ.

Share