Connect with us


      
ಕ್ರೀಡೆ

ರೋಹಿತ್ ಸಿಕ್ಸರ್ ಮೇಲೆ ಸಿಕ್ಸರ್! ಪಾಕಿಸ್ತಾನದ ಶಾಹಿದ್ ಅಫ್ರೀದಿ ರಿಕಾರ್ಡ್ ಧ್ವಂಸ!

Iranna Anchatageri

Published

on

ರಾಂಚಿ, ನ 20 (ಯುಎನ್ಐ) ರಾಂಚಿ 2ನೇ T20 ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು ಸೋಲಿಸಿ ಸರಣಿ ವಶಪಡಿಸಿಕೊಂಡಿದೆ. ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಜೋಡಿ ಶತಕದ ಜೊತೆಯಾಟ ಟೀಮ್ ಇಂಡಿಯಾ ರೋಚಕ ಗೆಲುವಿಗೆ ಕಾರಣವಾಯಿತು.
ರನ್ ಮಶೀನ್ ನಂತೆ ಬ್ಯಾಟಿಂಗ್ ಬೀಸುತ್ತಿರುವ ರೋಹಿತ್ ಶರ್ಮಾ 36 ಎಸೆತಗಳಲ್ಲಿ 55 ರನ್ ಗಳಿಸಿದರು. ಈ ವೇಳೆ 135 ಸ್ಟೈಕ್ ರೇಟ‌್‌ನೊಂದಿಗೆ ಅದ್ಭುತ ಹೊಡೆತಗಳಿಗೆ ಕೈಹಾಕಿದ ರೋಹಿತ್, 5 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿ ತಂಡದ ಗೆಲುವಿನತ್ತ ಕೊಂಡೊಯ್ದರು.


ಸಿಕ್ಸರ್ ರೋಹಿತ್!
ರಾಂಚಿ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ ಬ್ಯಾಟ್ ಬೀಸಿದ ರೋಹಿತ್, ಅದ್ಭುತ 5 ಸಿಕ್ಸರ್ ಬಾರಿಸಿದ್ರು. ಇದ್ರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 450ನೇ ಸಿಕ್ಸರ್ ಹೊಡೆದ್ರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಅನ್ನೋ ಖ್ಯಾತಿ ಗಳಿಸದ ರೋಹಿತ್, ಅತ್ಯಂತ ವೇಗವಾಗಿ ಅಂದ್ರೆ, 404 ಇನ್ನಿಂಗ್ಸ್ ನಲ್ಲಿ ಸಾಧನೆ ಮಾಡಿ ಪಾಕಿಸ್ತಾನದ ಶಾಹಿದ್ ಅಫ್ರೀದಿಯ ದಾಖಲೆ ನುಚ್ಚು ನೂರು ಮಾಡಿದ್ರು.
ಅಂತಾರಾಷ್ಟ್ರೀಯ ಕ್ರಿಕೆಟ್ ಅತಿವೇಗದ 450 ಸಿಕ್ಸಸ್
• ರೋಹಿತ್ ಶರ್ಮಾ – 404 ಇನ್ನಿಂಗ್ಸ್
• ಶಾಹಿದ್ ಆಫ್ರೀದಿ – 487 ಇನ್ನಿಂಗ್ಸ್
• ಕ್ರಿಸ್ ಗೇಲ್ – 499 ಇನ್ನಿಂಗ್ಸ್
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸ್ ಗಳಿಸದವರು
• ಕ್ರಿಸ್ ಗೇಲ್ – 553
• ಶಾಹಿದ್ ಆಫ್ರಿದಿ – 476
• ರೋಹಿತ್ ಶರ್ಮಾ – 454
ಟಿ -20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರು
• ಮಾರ್ಟಿನ್ ಗಪ್ಟಿಲ್ – 3248
• ವಿರಾಟ್ ಕೊಹ್ಲಿ – 3227
• ರೋಹಿತ್ ಶರ್ಮಾ – 3141
ನಾಯಕನಾದ್ಮೇಲೆ ಬದಲಾಯ್ತಾ ಅದೃಷ್ಟ?
ಕ್ಯಾಪ್ಟನ್ ಆದ್ಮೇಲೆ ರೋಹಿತ್ ಶರ್ಮಾ ಅವರ ಲಕ್ ಖುಲಾಯಿಸಿದೆ ಅನ್ನಬಹುದು. ಜೈಪುರ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿದ್ದ ರೋಹಿತ್ ಶರ್ಮಾ, ರಾಂಚಿಯಲ್ಲೂ ಇದನ್ನು ಮುಂದುವರಿಸಿದ್ರು. ಅಲ್ಲದೆ, 2 ಪಂದ್ಯಗಳಲ್ಲೂ ರೋಹಿತ್ ರನ್ ಸುರಿಮಳೆಗೈದಿದ್ದಾರೆ. ಜೈಪುರ ಟಿ-20ಯಲ್ಲಿ ರೋಹಿತ್ ಶರ್ಮಾ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಸತತ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದರು.
ರೋಹಿತ್ ಶರ್ಮಾ ಬ್ಯಾಟ್ ನಿಂದ ಜೈಪುರದಲ್ಲಿ 48 ರನ್ ಗಳಿಸಿದ್ದರೆ, ರಾಂಚಿಯಲ್ಲಿ 55 ರನ್ ಹೊಡೆದು ಗೆಲುವಿನ ನಗೆ ಬೀರಿದರು. ರೋಹಿತ್ ಶರ್ಮಾ ಇದುವರೆಗೆ ಟಿ-20ಯಲ್ಲಿ 29 ಬಾರಿ 50 ಕ್ಕಿಂತ ಅಧಿಕ ಸ್ಕೋರ್‌ ಮಾಡಿದ್ದಾರೆ. ಅದರಲ್ಲಿ 25 ಅರ್ಧಶತಕಗಳು ಮತ್ತು 4 ಶತಕಗಳಾಗಿವೆ. ಇನ್ನು ವಿರಾಟ್ ಕೊಹ್ಲಿ ಜತೆ ಹೋಲಿಕೆ ಮಾಡಿದ್ರೆ, 29 ಬಾರಿ 50 ಕ್ಕಿಂತ ಅಧಿಕ ರನ್ ಗಳಿಸಿದ ದಾಖಲೆ ವಿರಾಟ್ ಹೊಂದಿದ್ದಾರೆ. ಆದ್ರೆ, ಅವೆಲ್ಲ ಅರ್ಧ ಶತಕಗಳಾಗಿದ್ದು, ಶತಕ ಪೂರೈಸಿಲ್ಲ.

Continue Reading
Share